ಸುದ್ದಿಬಿಂದು ಬ್ಯೂರೋ
ಕಾರವಾರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕರಾಗಿರುವ ಶಿವರಾಮ ಹೆಬ್ಬಾರ್ ಅವರು ಮರಳಿ ಕಾಂಗ್ರೆಸ್ ಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ. ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಹೆಬ್ಬಾರ್ ಅವರು ಕಾಂಗ್ರೆಸ್ ಸೇರಿದ್ದರೆ. ಮುಂದಿನ ಆರು ತಿಂಗಳಲ್ಲಿ ನಡೆಯುವ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಯಲ್ಲಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸೋಲಿಲ್ಲದ ಸರದಾರ ಎಂದೆ ಕರೆಸಿಕೊಂಡು ಬರುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಭಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಅವರ ವಿರುದ್ಧ ಸೋಲಬೇಕಾದ ಪರಿಸ್ಥಿತಿ ಬಂತು.ಇನ್ನೂ ಹೆಬ್ಬಾರ್ ಸಹ ಕಾಂಗ್ರೆಸ್ ಸೇರಿಕೊಂಡರೆ ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಕುಮಟ ಕ್ಷೇತ್ರ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕರ ಉಳಿದುಕೊಳ್ಳಲಿದ್ದಾರೆ.
ಹೀಗಾಗಿ ಒಂದೊಮ್ಮೆ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಆರು ತಿಂಗಳ ಒಳಗಾಗಿ ಯಲ್ಲಾಪುರ ಕ್ಷೇತ್ರದಲ್ಲಿ ಮತ್ತೆ ಉಪಚುನಾವಣೆ ಎದುರಾಗಲಿದೆ.ಇನ್ನೂ ಈ ಕ್ಷೇತ್ರದಲ್ಲಿ ಅಷ್ಟೊಂದು ಪ್ರಭಾವಿ ಬಿಜೆಪಿ ಮುಖಂಡರು ಇಲ್ಲದೆ ಇರುವ ಕಾರಣ ಹಾಗೂ ಕಾಗೇರಿ ಅವರು ಸಹ ಶಿರಸಿ ಕ್ಷೇತ್ರದಲ್ಲಿ ಸೋತ್ತಿರುವುದಿಂದ ಉಪ ಚುನಾವಣೆ ನಡೆದಲ್ಲಿ ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲಬಹುದು ಎನ್ನುವುದು ಕಾಗೇರಿ ಅವರ ರಾಜಕೀಯ ಲೆಕ್ಕಾಚಾರ.ಹೀಗಾಗಿ ಹೆಬ್ಬಾರ್ ಅವರು ಕಾಂಗ್ರೆಸ್ ಗೆ ಹೋದ್ರೆ ತಾನು ಅಲ್ಲಿ ಸ್ಪರ್ಧೆ ಮಾಡಬಹುದು ಎನ್ನುವ ಲೆಕ್ಕಾಚಾರ ಇವರದ್ದಾಗಿದೆ.
ಶಿವರಾಮ ಹೆಬ್ಬಾರ್ ಅವರು ಹವ್ಯಕ ಸಮಾಜದವರಾಗಿದ್ದರೂ ಸಹ ಈ ಕ್ಷೇತ್ರದಲ್ಲಿರುವ ಹವ್ಯಕರಾಗಲಿ ಮೂಲ ಬಿಜೆಪಿಗರು ಅವರನ್ನ ಅಷ್ಟಾಗಿ ಬಿಜೆಪಿಯಲ್ಲಿರುವಾಗ ಒಪ್ಪಿಕೊಂಡಿರಲಿಲ್ಲ, ಇದು ಹೆಬ್ಬಾರ್ ಅವರಿಗೂ ಗೋತ್ತಿರುವ ಸತ್ಯ.ಮೊನ್ನೆಯಷ್ಟೆ ಮನಸ್ಸೊಳಗಿನ ಅಸಮಧಾನವನ್ನ ಹೆಬ್ಬಾರ್ ಅವರು ಹೊರಹಾಕಿದ್ದಾರೆ. ಇನ್ನೂ ಕಾಗೇರಿ ಅವರು ಇಲ್ಲಿಗೆ ಬಂದು ಸ್ಪರ್ಧೆ ಮಾಡಿದರೆ ಹವ್ಯಕರ ಮತಗಳ ಜೊತೆಗೆ ಲಿಂಗಾಯತ ಮತಗಳು ಸಹ ದೊಡ್ಡ ಮಟ್ಟದಲ್ಲಿ ಇರುವುದರಿಂದ ಗೆಲುವು ಸುಲಭ ಆಗಬಹುದು ಎನ್ನುವ ಲೆಕ್ಕಾಚಾರ ಸಹ ಇದೆ.
ಕಾಗೇರಿ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಮುಂಬರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಭಲ ಆಕಾಂಕ್ಷಿಯಾಗಿದ್ದರು. ಆದರೆ ಈಗ ಹೆಬ್ಬಾರ್ ಅವರಿಂದ ಯಲ್ಲಾಪುರ ಕ್ಷೇತ್ರ ತೆರವಾದರೆ. ಅಲ್ಲಿ ಕಾಗೇರಿಯವರನ್ನ ಕಣಕ್ಕಿಳಿಸಿದರೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಖಂಡರಿಗೆ ಒಂದಿಷ್ಟು ತಲೆನೋವು ಕಮ್ಮಿಯಾಗಲಿದೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸದನದಲ್ಲಿ ಮಾತ್ನನಾಡಲು ಬಿಜೆಪಿಯಲ್ಲಿ ಅಷ್ಟೊಂದು ಗಟ್ಟಿಧ್ವನಿಯವರು ಯಾರು ಇಲ್ಲದಂತಾಗಿದ್ದು, ಹೀಗಾಗಿ ಕಾಗೇರಿಯವರನ್ನ ಯಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಿ ಗೆಲ್ಲಿಸಬೇಕು ಎನ್ನುವುದು ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರು ಈಗಿನಿಂದ ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದರೆ ಶಿವರಾಮ ಹೆಬ್ಬಾರ್ ರಾಜಕೀಯಕ್ಕೆ ಹೊಸಬರಲ್ಲ. ಅವರು ಸಹ ಅನೇಕ ಭಾರೀ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿಕೊಂಡು ಬರುತ್ತಲ್ಲೆ ಇದ್ದಾರೆ. ಹೆಬ್ಬಾರ್ ಅವರು ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗತ್ತಾರೆ ಅಂದರೆ ಅವರ ಲೆಕ್ಕಾಚಾರ ಬೇರೆಯದ್ದೆ ಇರತ್ತೆ. ಅಷ್ಟೊಂದು ಧೈರ್ಯ ಇಲ್ಲದೆ ಹೆಬ್ಬಾರ್ ಕಾಂಗ್ರೆಸ್ ಗೆ ಹೋಗುವ ಬಗ್ಗೆ ಗಟ್ಟಿ ಮನಸ್ಸು ಮಾಡುತ್ತಿರಲ್ಲ. ಹೆಬ್ಬಾರ್ ಅವರ ರಾಜಕೀಯ ಆಟ ಬಲ್ಲವರಿಗಷ್ಟೆ ಗೋತ್ತು.