ಸುದ್ದಿಬಿಂದು ಬ್ಯೂರೋ
ಶಿರಸಿ : ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಶಿರಸಿ‌ ಕ್ಷೇತ್ರದ‌ ಕಾಂಗ್ರೆಸ್ ಶಾಸಕ‌ ಭೀಮಣ್ಣ ನಾಯ್ಕ(MLA Bhimanna Naik) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ(Uttarkannada) ಜಿಲ್ಲೆಯ ಶಿರಸಿಯಲ್ಲಿ ಈ ಕುರಿತಾಗಿ ಮಾತ್ನಾಡಿದ ಶಾಸಕ ಭೀಮಣ್ಣ ನಾಯ್ಕ, ಇವರು ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಅಂತಹ ಪಾರ್ಟಿ ಹಾರೋ ವ್ಯಕ್ತಿಗಳಾಗಿದ್ದಾರೆ. ಅವತ್ತು ಅಧಿಕಾರಕ್ಕಾಗಿ, ಹಣಕ್ಕಾಗಿ ಪಕ್ಷಬಿಟ್ಟು ಹೋದವರು, ಅಧಿಕಾರ ಸಿಗೋದಾರೆ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗತ್ತಾರೆ. ಅಂದು ಅಧಿಕಾರಕ್ಕಾಗಿ ಬಿಜೆಪಿಗೆ(BJP) ಹಾರಿದರು ಈಗ ಅಧಿಕಾರ ಇರುವ ಕಾಂಗ್ರೆಸ್ ಗೆ ಬರಲು ಹೊರಟಿದ್ದಾರೆ.

ಇವರು ಯಾವ ಉದ್ದೇಶಕ್ಕೆ ಕಾಂಗ್ರೆಸ್ ಗೆ ( Congress ) ಬರುತ್ತೇನೆ ಎಂಬುದನ್ನು ಜನಸಾಮಾನ್ಯರಿಗೆ, ಕಾರ್ಯಕರ್ತರಿಗೆ ತಿಳಿಸಿ ಬರಲಿ.ಇಂತಹ ಭಂಡ ರಾಜಕಾರಣವನ್ನು(Politics)ಮಾಡುವುದನ್ನು ಮೊದಲು ಬಿಡಲಿ ಎಂದು ನೇರ ನೇರವಾಗಿ ಹೆಬ್ಬಾರ ವಿರುದ್ದ ಶಾಸಕ ಭೀಮಣ್ಣ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.