ಸುದ್ದಿಬಿಂದು ಬ್ಯೂರೋ ವರದಿ
ಗೋವಾ:  ಗೋವಾ ರಾಜ್ಯದ ಮಡಗಾಂವನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಇದ್ದ ಉತ್ತರಕನ್ನಡ ಜಿಲ್ಲೆಯ ವ್ಯಕ್ತಿ ಓರ್ವ ಹೋಟೆಲ್ ನಲ್ಲಿ ಮೃತ ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿಗ ಮಾಲದ ಮನೆಯ ಸುಬ್ರಾಯ ಭಟ್ (53) ಎಂದು ಗುರುತಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಇವರು ಗೋವಾದ ಮಡಗಾಂವನ ಹೋಟೆಲ್‍ವೊಂದರಲ್ಲಿ ಸುಬ್ರಾಯ ಭಟ್ ವಾಸ್ತವ್ಯ ಮಾಡಿದ್ದರು ಎನ್ನಲಾಗಿದೆ. ಆದರೆ ಮರುದಿನ ಬೆಳಗಾದರೂ ರೂಮಿನಿಂದ ಹೊರ ಬಾರದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಬಾಗಿಲು ಬಡಿದಿದ್ದಾರಂತೆ. ಆದರೂ ಸಹ ಒಳಗಡೆ ಇದ್ದ ಸುಬ್ರಾಯ್ ಭಟ್ ಬಾಗಿಲು ತೆರೆಯಲಿಲ್ಲ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೋಣೆಯ ಬಾಗಿಲು ತೆರೆದು ನೋಡಿದಾಗ ಸುಬ್ರಾಯ ಭಟ್ ರವರು ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿದ್ದರು. ಕೂಡಲೇ ಇವರನ್ನು ಮಡಗಾಂವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇವರು ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ‌. ಮೃತರ ಸಾವಿಗೆ ಇನ್ನೂ ಇದುವರಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಗಮನಿಸಿ