suddibindu.in
Kumta : ಕುಮಟಾ : ನನಗೆ ಟಿಕೆಟ್ ಸಿಗುತ್ತೊ ಬಿಡುತ್ತೊ ಎಂಬ ಚಿಂತೆ ಬೇರೆಯವರಿಗ್ಯಾಕೆ. ಉತ್ತರ ಕನ್ನಡ(uttar kannada)ಕ್ಷೇತ್ರದ ಟಿಕೆಟ್ ವಿಚಾರ ಬೇರೆಯವರಿಗ್ಯಾಕೆ..? ಒಟ್ಟಿನಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಸಂಸದ ಅನಂತಕುಮಾರ ಹೆಗಡೆ (MP Anantakumar,) ಹೇಳಿದರು.
ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಜಗತ್ಪ್ರಸಿದ್ಧ ಯಾಣ (Yana)ದೇವಸ್ಥಾನ ಪ್ರವಾಸಿಗರಿಗಾಗಿ ದೇಶದಲ್ಲೇ ಮೊದಲ ಬಾರಿಗೆ ವೈಫೈ- 7 ಸೇವೆ ಉದ್ಘಾಟಿಸಿ ಮಾತನಾಡಿದರು.ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ (List of Candidates Released,)ಮಾಡೋ ವಿಚಾರ ಹೈ ಕಮಾಂಡ್ ನಿರ್ಧರಿಸುತ್ತೆ ಇವತ್ತು ಮಾಡುತ್ತೋ ಮಾತ್ಯಾವತ್ತು ಮಾಡುತ್ತೆ ಎಂಬುವುದು ಗೊತ್ತಿಲ್ಲ ಎಂದರು.
ಇದನ್ನೂ ಓದಿ:-
- ಕರಾವಳಿಯಲ್ಲಿ ಅಬ್ಬರಿಸುತ್ತಿರುವ ವರುಣ,ಇಂದು ರೆಡ್ ಅಲರ್ಟ್, ಶಾಲೆಗಳಿಗಿಲ್ಲ ರಜೆ
- ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಅದೇಶ
- ಮುಂದಿನ ಮೂರು ದಿನ ಉತ್ತರ ಕನ್ನಡ ಸೇರಿದ ರಾಜ್ಯದ ಹಲವೆಡೆ ಭಾರೀ ಮಳೆ
ಅನಂತಕುಮಾರ ಹೆಗಡೆ ಒಂದೇ ಒಂದು ಅಭಿವೃದ್ದಿ ಮಾಡಿಲ್ಲ ಎಂದು ಸಿ ಎಂ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅನಂತಕುಮಾರ ಇಂತಹ ಪುಷ್ಯ ಕ್ಷೇತಗಳಲ್ಲಿ ಸಿದ್ದರಾಮಯ್ಯನವರ ಹೆಸರು ನೆನಪು ಮಾಡಿಕೊಳ್ಳಬಾರದು ಎಂದರು.