ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಇಲ್ಲಿನ ಸರಕಾರಿ ಆಸ್ಪತ್ರೆಯ ಗಾರೆ ಕೆಲಸಕ್ಕೆ ಬಂದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಓರ್ವನಿಗೆ ಆತನ ಜೊತೆಯಲ್ಲಿದ್ದವರೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದೆ.
ಹುಬ್ಬಳ್ಳಿ ಮೂಲದ ಇಮ್ತಿಯಾಜ್ (25) ಕೊಲೆಯಾದ ಕಾರ್ಮಿಕನಾಗಿದ್ದಾನೆ. ನಾಲ್ವರು ಸೇರಿಕೊಂಡು ಕಳೆದ ಒಂದು ತಿಂಗಳಿಂದ ಕುಮಟಾದ ಸರಕಾರಿ ಆಸ್ಪತ್ರೆಯಲ್ಲಿ ಗಾರೆ ಕೆಲಸಕ್ಕೆ ಹುಬ್ಬಳ್ಳಿಯಿಂದ ಬಂದಿದ್ದರು. ಯಾವುದೋ ಕಾರಣಕ್ಕೆ ನಿನ್ನೆ ರಾತ್ರಿ ಮೂವರು ಸೇರಿ ಇಮ್ತಿಯಾಜ್ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈಗಾಗಲೇ ಕುಮಟಾ ಇನ್ಸ್ಪೆಕ್ಟರ್ ಯೋಗೇಶ ನೇತೃತ್ವದಲ್ಲಿ ಪಿಎಸ್ಐ ಮಯೂರ್ ಅವರ ತಂಡ ಈಗಾಗಲೇ ಆರೋಪಿಗಳ ಪತ್ತೆಗಾಗಿ ಹುಬ್ಬಳ್ಳಿಗೆ ಹೋಗಿರುವುದಾಗಿ ತಿಳಿದು ಬಂದಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಮನಿಸಿ