ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ನೀರಿನಲ್ಲಿ ಮುಳುಗಿ ತಂದೆ ಮಗ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ನಡೆದಿದೆ.

ಖಲಂದರ್‌ ಪಕ್ರು ಸಾಬ್ ಹಾಗೂ ಆತನ‌ ಮಗ ತನ್ವೀರ್ ಖಲಂದರ್ ಸಾಬ್ ಎಂಬುವವರೆ ಮೃಪಟ್ಟವರಾಗಿದ್ದಾರೆ. ತಂದೆ‌ ಹಾಗೂ ಮಗ ಇಬ್ಬರೂ ಸೇರಿ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಹಳ್ಳದಲ್ಲಿ ‌ಕಾಲು ಜಾರಿ ಬಿದ್ದಿದ್ದು ಮೃತಪಟ್ಟಿದ್ದಾರೆ. ಇಬ್ಬರೂ ಸಹ ಮಧ್ಯಾಹ್ನ ವೇಳೆ‌ ಮೀನು ಹಿಡಿಯಲು‌ ಹಳ್ಳಕ್ಕೆ ಹೋದವರು ರಾತ್ರಿ ಆದರೂ ಸಹ‌ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದಾಂಗಿ ಅನುಮಾನಗೊಂಡ‌ ಮನೆಯವರು ಹುಟುಕಾಟ ನಡೆಸಿದ್ದಾರೆ.

ಇಬ್ಬರ ಶವ ಇಂದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ‌ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದು, ಈ ಬಗ್ಗೆ ‌ಯಲ್ಲಾಪುರ ಪೊಲೀಸ್‌‌ ಠಾಣೆಯಲ್ಲಿ ‌ಪ್ರಕರಣ‌‌ ದಾಖಲಾಗಿದೆ.