ಸುದ್ದಿಬಿಂದು ಬ್ಯೂರೋ
ಕಾರವಾರ:ಲೋಕಸಭಾ ಚುನಾವಣೆಯನ್ನ ಗೆಲ್ಲಲೇ ಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ರಾಜ್ಯಾದ್ಯಂತ ನೂತನ ಪದಾಧಿಕಾರಿಗಳನ್ನ ನೇಮಕ‌ ಮಾಡಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪದಾಧಿಕಾರಿಗಳು ನೇಮಕದ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡಲಾರಂಬಿಸಿದೆ

ಉತ್ತರಕನ್ನಡದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್ ಎಸ್ ಹೆಗಡೆಯವರು ಅಧಿಕಾರ ಸ್ವೀಕಾರ ಮಾಡಿ ತಿಂಗಳಾಗುವುದರೊಳಗೆ ಜಿಲ್ಲೆಯ ಅನೇಕ ಹಿರಿಯ ಮುಖಂಡರುಗಳಿಂದ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಬೇಕೆನ್ನುವ ಕೂಗು ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಪಕ್ಷದಲ್ಲಿ ಅನೇಕ ವರ್ಷ ದುಡಿದಂತ ಕಾರ್ಯಕರ್ತರನ್ನು ಮುಖಂಡರನ್ನು ಕಡೆಗಣಿಸಿ ತಮ್ಮಗೆ ಬೇಕಾದಂತವರನ್ನ‌ ಹಾಗೂ ಪಕ್ಷಕ್ಕಾಗಿ ದುಡಿದವರನ್ನ ನಿರ್ಲಕ್ಷ್ಯ‌ಮಾಡಲಾಗಿದೆ‌ ಎನ್ನುವ ಆರೋಪ‌ ಕೇಳಿ ಬರುತ್ತಿದೆ.

ಪಕ್ಷಕ್ಕಾಗಿ ಕೆಲಸ ಮಾಡದೆ ಇದ್ದವರನ್ನು ಪಕ್ಷದ ಪದಾಧಿಕಾರಿಗಳನ್ನಾಗಿ ನೇಮಿಸಿ ಪಕ್ಷದಲ್ಲಿ ಗೊಂದಲದ ವಾತಾವರಣವನ್ನ ಹಾಲಿ ಅಧ್ಯಕ್ಷರು ನಿರ್ಮಿಸಿದ್ದಾರೆಂದು ಪಕ್ಷದ ವಲಯದಲ್ಲಿ ಚರ್ಚೆ ಆಗತೊಡಗಿದೆ. ತಾವು ಮುಂದಿನ ದಿನದಲ್ಲಿ ಎಂಪಿ ಟಿಕೆಟ್ ಗಿಟ್ಟಿಸಿಕೊಳ್ಳುವ ಹಂಬಲದಿಂದ ಪಕ್ಷದಲ್ಲಿ ದುಡಿದಂತ ಅನೇಕ ನಿಷ್ಠಾವಂತ ಕಾರ್ಯಕರ್ತರನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಪದಾಧಿಕಾರಿಗಳನ್ನ ನೇಮಕ‌ ಮಾಡುವ ಸಮಯದಲ್ಲಿ ಯಾರೊಬ್ಬರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ‌ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ನೂತನ ಅಧ್ಯಕ್ಷರ ಬಗ್ಗೆ ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಅನೇಕರು ಈಗಾಗಲೇ ಪಕ್ಷದ ನಾಯಕರ ಎದುರು ಅಸಮಧಾನ ಹೊರಹಾಕಿದ್ದಾರೆ.‌ಈ ಬಗ್ಗೆ ಈಗಾಗಲೆ ಜಿಲ್ಲೆಯ ಪ್ರಮುಖ ನಾಯಕರು ಜಿಲ್ಲಾಧ್ಷರಿಗೆ ಎಲ್ಲವನ್ನ ತಿಳಿ ಹೇಳಿದ್ದರು. ಯಾವುದನ್ನ ಲೆಕ್ಕಿಸದೆ ತಮ್ಮಗೆ ಮನಸ್ಸಿಗೆ ಬಂದ ಹಾಗೆ ಮುಂದುವರೆಯುತ್ತಿದ್ದಾರೆಂದು ಪಕ್ಷದ ಅನೇಕರು ದೂರಿದ್ದಾರೆ.