ಸುದ್ದಿಬಿಂದು ಬ್ಯೂರೋ
ಮುಂಡಗೋಡ : ತಾಲೂಕಿನ ಬಾಚಣಕಿ ಗ್ರಾಮದಲ್ಲಿ ನಾಡಬಾಂಬ್ ಸ್ಪೋಟಗೊಂಡು ಕುರಿ ಕಾಯುತ್ತಿದ್ದ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಾಚಣಕಿಯ ಬರಮಪ್ಪ ವಡ್ಡರ್ ಎಂಬುವ ರೈತನೇ ನಾಡಬಾಂಬ್ ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದಾನೆ. ಈತ ತನ್ನ ಕುರಿಗಳನ್ನು ಮೇಯಿಸಲು ಊರ ಪಕ್ಕದಲ್ಲೇ ಇರೋ ಕೆರೆಯ ಹತ್ತಿರ ಹೋಗಿದ್ದ. ಈ ವೇಳೆ ಬಹಿರ್ದೆಸೆಗೆ ಅಂತಾ ಹೋಗಿದ್ದಾಗ ಹೊಳಪಿರೋ ಒಂದು ವಸ್ತುವೊಂದನ್ನ ಕಂಡು. ಏನಿರಬಹುದು ಅಂತಾ ಕೈಯಿಂದ ಅದನ್ನ ಹಿಡಿದು ಹಿಚುಕಿದ್ದಾನೆ. ತಕ್ಷಣ ಅದು ಭಯಾನಕವಾಗಿ ಸ್ಪೋಟಗೊಂಡಿದೆ. ಪರಿಣಾಮ ರೈತನ ಎಡಗೈನ ಎರಡು ಬೆರಳು ಕಟ್ ಆಗಿದೆ. ಹೀಗಾಗಿ, ಮುಂಡಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ರೈತ ಚಿಕಿತ್ಸೆ ಪಡೆದು ಸದ್ಯ ಮನೆಗೆ ಬಂದಿದ್ದಾನೆ‌.

ಪ್ರಾಣಿಗಳ ಬೇಟೆಗೆ ಬಾಂಬ್..?
ಅಸಲಿ,ಬಾಚಣಕಿ, ವಡಗಟ್ಟಾ ಭಾಗ ಸೇರಿದಂತೆ ತಾಲೂಕಿನ ಹಲವು ಕಡೆ ಕಾಡು ಪ್ರಾಣಿಗಳ ಬೇಟೆ ನಿರಂತರವಾಗಿ ನಡೆಸಲಾಗುತ್ತಿದೆ ಎನ್ನುವ ಆರೋಪಗಳಿವೆ. ವಿಪರ್ಯಾಸ ಕೆಲವು ಅರಣ್ಯ ಸಿಬ್ಬಂದಿಗಳೇ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಸಾಥ್ ನೀಡ್ತಾರೆ ಅನ್ನೋ ಆರೋಪಗಳಿವೆ.

ಸ್ಪೋಟಗೊಂಡು ಇನ್ನೇನು ರೈತನ ಜೀವಕ್ಕೇ ಕುತ್ತು ತಂದಿದ್ದ ಆ ವಸ್ತು ನಾಡಬಾಂಬ್ ಇರಬಹುದು ಅಂತಾ ಅಂದಾಜಿಸಲಾಗಿದೆ. ಊರ ಪಕ್ಕದಲ್ಲೇ ಅದೂ ಕೂಡ ಜನರು ಓಡಾಡುವ, ಸಾಕು ಪ್ರಾಣಿಗಳು ನೀರು ಕುಡಿಯಲು ಅವಲಂಬಿಸೊರೋ ಕೆರೆಯ ಪಕ್ಕದಲ್ಲೇ ಹೀಗೆ ನಾಡಬಾಂಬ್ ಇಟ್ಟಿದ್ದಾರೆ.