ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉತ್ತರಕನ್ನಡ‌ ಜಿಲ್ಲೆಯ ಜನರ ದಶಕದ ಕನಸಾಗಿರುವ ಸೂಪರ್‌ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ಇದೆ‌ ನವೆಂಬರ್ 29ರಂದು ಮಧ್ಯಾಹ್ನ 5ಗಂಟೆಗೆ ಲಯನ್ಸ್ ಸಭಾಭವನದಲ್ಲಿ ಪಕ್ಷಾತೀತವಾಗಿರುವ ಸಭೆ ಕರೆಯಲಾಗಿದೆ‌ ಎಂದು ಖ್ಯಾತ ವೈದ್ಯರಾಗಿರುವ ಡಾ.‌ಜಿ ಜಿ ಹೆಗಡೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇಲ್ಲದೆ ಇರುವ ಕಾರಣ ಜಿಲ್ಲೆಯ ಜನ ಆರೋಗ್ಯಕ್ಕಾಗಿ ಪರ ಜಿಲ್ಲೆ ಹಾಗೂ ರಾಜ್ಯವನ್ನ ಅವಲಂಬಿಸಿಕೊಂಡಿದ್ದು, ಆಸ್ಪತ್ರೆ ನಿರ್ಮಾಣವಾಗಬೇಕೆಂದು ದಶಕದಿಂದ ಹೋರಾಟ ನಡೆಸಾಗುತ್ತಿದೆ.ಆದರೂ ಇದುಗರೆಗೆ ಜಿಲ್ಲೆಯ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.‌ಹೀಗಾಗಿ ಆಸ್ಪತ್ರೆ ನಿರ್ಮಾಣಕ್ಕಾಗಿ ಹೋರಾಟ ಅನಿವಾರ್ಯವಾಗಿದ್ದು, ಈ‌ನಿಟ್ಟಿನಲ್ಲಿ ಪಕ್ಷಾತೀಯವಾಗಿ ಹಾಗೂ ರಾಜಕಿಯೇತರವಾಗಿ ಇದೆ 29ರಂದು ಶುಕ್ರವಾರ ಮಧ್ಯಾಹ್ನ ಸಭೆ ಕರೆಯಲಾಗಿದೆ ಅಂತಾ ಡಾ. ಜಿ ಜಿ ಹೆಗಡೆ ತಿಳಿಸಿದ್ದಾರೆ.

ಗಮನಿಸಿ