ಕಾರವಾರ : ಮೀನುಗಾರರ ಬಲೆಗೆ ನಿತ್ಯ ಸಿಗುವ ಸಾಮಾನ್ಯ ಉದ್ದ ಮೀನಿಗಿಂತ ಅತಿ ದೊಡ್ಡದಾಗಿರುವ ಬಂಗಡೆ ಮೀನೊಂದು ಬಲೆ ಸಿಕ್ಕಿದ್ದು,
ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಇದು ದೇಶದಲ್ಲಿಯೆ ಅತಿದೊಡ್ಡ ಬಂಡಗೆ ಮೀನು ಎಂದು ಹೇಳಲಾಗುತ್ತಿದೆ‌.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲಿ (KARWAR PORT) ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಬಂಗಡೆ ಮೀನು ಬಲೆಗೆ ಬಿದ್ದಿದೆ. ಬೈತಕೋಲದ ಆನಂದ ರಾಮ ಹರಿಕಂತ್ರ ಅವರು ಆಳಸಮುದ್ರದಲ್ಲಿ ಮೀನು ಹಿಡಿಯುವಾಗ ಅವರ ಬಲೆಗೆ ಈ ಮೀನು ಬಿದ್ದಿದೆ. ಈ ಬಂಗುಡೆ ಮೀನು ಬರೋಬ್ಬರಿ 1.23 ಕೆಜಿ ತೂಕವಿದ್ದು,19ಇಂಚು ಉದ್ದ ಮತ್ತು 4.5 ಇಂಚು ಅಗಲವಿದೆ.

ಸಾಮಾನ್ಯವಾಗಿ ಕಂಡುಬರುವ ಬಂಗಡೆ ಮೀನುಗಳಿಗಿಂತ ಈ ಮೀನು ದೊಡ್ಡದಿದೆ. ಈ ಬಂಗಡೆ ಮೀನನ್ನು ನವೀನ ಹರಿಕಂತ್ರ ಎನ್ನುವವರು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ನೀಡಿದ್ದು, ಸಾರ್ವಜನಿಕ ವೀಕ್ಷಣೆಗೆ ಸಿಗಲಿದೆ.