ಸುದ್ದಿಬಿಂದು ಬ್ಯೂರೋ
ಕಾರವಾರ : ಬಿಜೆಪಿಯಿಂದ ಈ ಬಾರಿ‌ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತನ್ನ ಸೋಲಿನ ಬಗ್ಗೆ ಹಾಗೂ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತ್ತಿರುವ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದು ಡಿಸಿಸಿ ಉಪಾಧ್ಯಕ್ಷ ಆರ್ ಎಚ್ ನಾಯ್ಕ ಕಾಗೇರಿ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ್ದು, ಕಾಂಗ್ರೆಸ್‌ ಪಕ್ಷದ ಜನಪರ ಕಾರ್ಯಕ್ರಮವನ್ನ ರಾಜ್ಯದ ಜನ ಮೆಚ್ಚಿಕೊಂಡಿದ್ದಾರೆ.ಇದನ್ನ ಸಹಿಸದ ಬಿಜೆಪಿ ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯ ಪ್ರಶ್ನಿಸುವ ಧೈರ್ಯವಿಲ್ಲದ ಬಿಜೆಪಿ ಜನರ ದಾರಿ ತಪ್ಪಿಸಲು ಕಾಂಗ್ರೆಸ್‌ ಜನಪರ ಕೆಲಸ ಮಾಡಿರುವುದನ್ನೆಲ್ಲ ಸುಳ್ಳು ಎಂದು ಹೇಳಿ ಬೀದಿಯಲ್ಲಿ ರಂಪಾಟ ಮಾಡುವ ಹೊಸ ಮಾರ್ಗ ಕಂಡುಕೊಂಡಿದೆ. ಸುಳ್ಳು ಹೇಳಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿರುವ ಬಿಜೆಪಿಗರ ವಿರುದ್ಧ ಜನರು ಎಚ್ಚರಗೊಳ್ಳಬೇಕಿದೆ ಎಂದರು.

ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾಂಗ್ರೆಸ್ ವಿರುದ್ಧ ಮಾಡಿರುವ ಆಪಾದಾನೆಗೆ ಉತ್ತರಿಸಿದ ಆರ್ ಎಚ್ ನಾಯ್ಕ, ಕಾಗೇರಿಯವರು ಮೊದಲು ಕಾಂಗ್ರೆಸ್ ಇತಿಹಾಸವನ್ನ ಓದಿಕೊಳ್ಳಬೇಕಿದೆ. ಸ್ವಾತಂತ್ರ್ಯ ನಂತರ ಪಂಡಿತ್ ಜವಹಾರಲಾಲ್ ನೆಹರೂರವರು ಪಂಚವಾರ್ಷಿಕ ಯೋಜನೆ ಮೂಲಕ ಕೃಷಿ, ಕೈಗಾರಿಕೆ, ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಾಡಿರುವ ಸುಧಾರಣೆ ಅಪಾರ, ಇಂದಿರಾ ಗಾಂಧಿ ಅವರ – 20 ಅಂಶದ ಕಾರ್ಯಕ್ರಮದ ಮೂಲಕ ವಿಧವಾ ವೇತನ, ಪ್ರಧಾನ ವೇತನ, ಸೂರಿಲ್ಲದವರಿಗೆ ಹಾಗೂ ಬಡವರಿಗೆ ಮನೆ ನೀಡಿರುವುದು, ಬಡವರಿಗೆ ಸಬ್ಸಿಡಿ ಮೂಲಕ ಕೃಷಿಗೆ ವ್ಯಾಪಾರವ್ಯವಹಾರಕ್ಕೆ, ಐಆ‌ಡಿ.ಪಿ. ಸಾಲ ನೀಡಿ ಪ್ರೋತ್ಸಾಹಿಸಿರುವುದು, ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಿರುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನ ನೀಡಿದ್ದಾರೆ.

ವಿಧಾನಸಭಾ ಅಧ್ಯಕ್ಷರಾಗಿದ್ದಂತಹ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾಂಗ್ರೆಸ್ ವಿರುದ್ಧ ಆಧಾರ ರಹಿತವಾದ ಆಪಾದನೆ ಮಾಡಿರುವುದು ಅವರಿಗೆ ಶೋಭೆ ತರುವಂತದಲ್ಲ. ಅನೈತಿಕವಾಗಿ ಪ್ರಜಾವುಭುತ್ವದ ಸಿದ್ಧಾಂತಕ್ಕೆ ವಿರುದ್ಧವಾಗಿ ರಚನೆಗೊಂಡ ಬಿಜೆಪಿ ನೇತ್ರತ್ವದ ಸರಕಾರ 40% ಕಮಿಶನ್ ಸರಕಾರ ಎಂದು ಗುತ್ತಿಗೆದಾರರ ಅಧ್ಯಕ್ಷ ಕೆಂಪಣ ಮೂಲಕ ಹಣಿಪಟ್ಟಿ ಪಡೆದಿರುವುದನ್ನು ತಾವು ಮರೆತುಬಿಟ್ಟಿದ್ದೀರಾ ಎಂದು ಕಾಗೇರಿಯವರಿಗೆ ಈ ಮೂಲಕ ಪ್ರಶ್ನಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ನಂತರ ಬಿಜೆಪಿಯ ಯಾವೊಬ್ಬ ಲೀಡರ್ ಸಹ ಸರಿಯಾಗಿ ನಿದ್ದೆ ಮಾಡಿಲ್ಲ, ಕಾರಣ ತಮ್ಮ ಪಕ್ಷ ಮುಂದಿನ ದಿನಗಳಲ್ಲಿ ಕಂಡಿತ ಅಧಿಕಾರಕ್ಕೆ, ಬರಲು ಸಾಧ್ಯವಾಗುವುದಿಲ್ಲ ಎಂದು ಅವರು ಅರಿತಂತಿತ್ತು. ಹಾಗಾಗಿ ಅಂದು ಹೆದರಿದ ಇವರು 40% ಕಮಿಶನ್ ಆಶೆಗಾಗಿ ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ನಿಯಮ ಮೀರಿ ಮಂಜೂರಿಸಿದ್ದರು.

ಬಿಜೆಪಿ ಪಕ್ಷದವರು ನಿಯಮ ಮೀರಿ ಮಂಜೂರಿಸಿದ ಕಾಮಗಾರಿಯ ಸಾವಿರಾರು ಸಾವಿರ ಕೋಟಿ ರೂಪಾಯಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಕೆಲಸ ಈಗ ಕಾಂಗ್ರೆಸ್‌ ಹೆಗಲ ಮೇಲೆ ಬಿದ್ದಿದೆ ಎಂದು ಆರ್ ಎಚ್ ನಾಯ್ಕ ಹೇಳಿದರು.