ಸುದ್ದಿಸುದ್ದಿಬಿಂದು ಬ್ಯೂರೋ
ಬನವಾಸಿ : ಕುಮಟದ ವ್ಯಕ್ತಿ ಒಬ್ಬರಿಗೆ ನಕಲಿ ಬಂಗಾರ (fake gold) ನೀಡಿ ಮೋಸ ಮಾಡಿದ ಆನವಟ್ಟಿಯ ವ್ಯಕ್ತಿಯ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ (Utarakannda) ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
ಕೊಟ್ರಪ್ಪ ದುರ್ಗಪ್ಪ ಕೊರಚರ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ.ಈತ ಕುಮಟದ ಹೆಗಡೆಯ ಲಿಂಗಪ್ಪ ನಾಯ್ಕ ಅವರಿಂದ ಹಣ ಪಡೆದು ಮೋಸ ಮಾಡಿದ್ದ, ಬಂಧಿತ ಆರೋಪಿಯಿಂದ 4.50 ಲಕ್ಷರೂ ಹಣವನ್ನ ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ.
ಡಿ.ಎಸ್.ಪಿ. ಕೆ.ಎಲ್. ಗಣೇಶ ಹಾಗೂ ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಬನವಾಸಿ ಪಿ.ಎಸ್.ಐ. ಚಂದ್ರಕಲಾ ಪತ್ತಾರ, ತನಿಖಾ ಪಿ.ಎಸ್.ಐ. ಸುನೀಲ್ ಕುಮಾರ ಹಾಗೂ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಿದ್ದರು