ಸುದ್ದಿಬಿಂದು ಬ್ಯೂರೋ
ಕುಮಟ
: ತಾಲೂಕಿನಾದ್ಯಂತ ಈಗಷ್ಟೆ ಮಳೆ ಆರಂಭವಾಗಿದ್ದು, ಜಿಟಿಜಿಟಿ ಮಳೆ ಆರಂಭಾಗಿದೆ. ಆದರೆ ಮಳೆ ಹನಿ ಸ್ವಲ್ಪವಾದರೆ ಸಾಕು ವಿದ್ಯುತ್ ಕೈ ಕೊಡುತ್ತಿದೆ. ಮೂರ ನಾಲ್ಕು ದಿನಗಳಿಂದ ಇದೆ ಪರಿಸ್ಥಿತಿ ತಾಲೂಕಿನಾದ್ಯಂತ ಮುಂದುವರೆದೆ.
ಕಳೆದ ನಾಲ್ಕೈದು ದಿನಗಳಿಂದ ಆಗೋಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆ.

ಆದರೆ ಸ್ವಲ್ಪ ಮೋಡವಾದ ವಾತಾವರಣ ಕಂಡರೆ ಸಾಕು, ವಿದ್ಯುತ್ ಆಪ್ ಆಗುತ್ತಿದೆ.ಇರಿದಂದಾಹಿ ನಗರದ ಜನತೆಯ ಜೊತೆಗೆ ಗ್ರಾಮೀಣ ಭಾಗದ ಜನರು ವಿದ್ಯುತ್ ಇಲ್ಲದೆ ಪರದಾಟ ಮಾಡುವಂತಾಗಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಕೇಳಿದ್ದರೆ ಪದೆ ಪದೆ ಮೇಲ್ ಲೈನ್ ಕೈಕೊಟ್ಟಿದೆ. ಕೆಳಗಿನ ಲೈನ್ ಕೈ ಕೊಟ್ಡಿದೆ ಎಂಬ ಸಿದ್ದವಾದ ಉತ್ತರ ಬರುತ್ತಿದೆ.ಒಮ್ಮೆ ಮಳೆ ಬಂದರೆ ಮೂರು ನಾಲ್ಕು ಗಂಟೆ ವಿದ್ಯುತ್ ಇಲ್ಲದಂತಾಗಿದೆ.ಈಗಂತೂ ಪ್ರತಿಯೊಂದಕ್ಕೂ ಕರೆಂಟ್ ಇಲ್ಲದೆ. ಜೀವನ ನಡೆದಯ ಪರಿಸ್ಥಿತಿ ಇದೆ. ಆದರೆ ಕೆಇಬಿ ಅವರ ನಿರ್ಲಕ್ಷವೋ ಅಥವಾ ಇನ್ನಾವ ಕಾರಣಕ್ಕೆ ಈರೀತಿ ಕರೆಂಟ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎನ್ನುವುದು ಯಾರಿಗೂ ಅರ್ಥವಾಗದಂತಾಗಿದೆ.

ಈಗಷ್ಟೆ ಮಳೆಗಾಲ ಆರಂಭಾಗಿದ್ದು, ಇನ್ನೂ ಮೂರು ನಾಲ್ಕು ತಿಂಗಳು ಮಳೆಗಾಲ ಇರಲಿದ್ದು, ಹೆಸ್ಕಾಂ ಇಲಾಖೆ ಮೋಡವಾದಾಗಲ್ಲೆಲ್ಲಾ ಈರೀತಿ ಕರೆಂಟ್ ತೆಗೆಯುತ್ತಾ ಕುಳಿತರೆ ಮುಂದೇನು ಅಂತಾ ಜನರು ಆಡಿಕೊಳ್ಳುವಂತಾಗಿದೆ. ಒಂದು ಕಡೆ ಸರಕಾರ 200ಯೂನಿಟ್ ಒಳಗಿನ ವಿದ್ಯುತ್ ಬಳಕೆ ದಾರರಿಗೆ ಉಚಿತ ಎಂದು ಗ್ಯಾರಂಟಿ ಘೋಷಣೆ ಮಾಡಿದೆ.ಈರೀತಿ ಮಳೆಗಾಲದಲ್ಲಿ ಕರೆಂಟ ಕೈ ಕೊಟ್ಟರೆ 20ಯೂನಿಟ್ ದಾಟುವುದು ಕಷ್ಟ. ಸರಕಾರದವೆ ಈ ರೀತಿ ಕರೆಂಟ್ ತೆಗೆಸುವ ಕೆಲಸ ಮಾಡಿಸುತ್ತಿದೇಯಾ ಎನ್ನುವ ಬಗ್ಗೆ ಜನರು ಮಾತನಾಡಿ‌ ಕೊಳ್ಳುತ್ತಿದ್ದಾರೆ.ಸರಕಾರ ಉಚಿತ ಕರೆಂಟ್ ಕೊಡದೆ ಇದ್ದರೂ ಚಿಂತೆಯಿಲ್ಲ. ನಿರಂತರ ಕರೆಂಟ್ ಬೇಕು ಅನ್ನುವುದು ಜನರ ಅಭಿಪ್ರಾಯವಾಗಿದೆ