suddibindu.in
ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನೆಗೆ ಮತ್ತೊಬ್ಬ ಯುವ ಉತ್ಸಾಹಿ‌ ಬ್ರಹ್ಮಾಸ್ತ್ರ ಸೇರ್ಪಡೆಯಾಗಿದೆ. ಯುವ ನಾಯಕ ವಿವೇಕ್ ಹೆಬ್ಬಾರ್ ಅವರನ್ನು ಮಾನ್ಯ ಉಪ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರು ಆದ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ಕೆಪಿಸಿಸಿ ಸದಸ್ಯರನ್ನಾಗಿಸಿ ಪಕ್ಷ ಸಂಘಟನೆಯ ಮಹತ್ವದ ಜವಾಬ್ದಾರಿ ನೀಡಿದ್ದಾರೆ.

ತಂದೆ ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಚಾಣಾಕ್ಷತೆ. ಹಿರಿಯ ನಾಯಕರ ಮಾರ್ಗದರ್ಶನ‌. ಕ್ಷೇತ್ರದ ಯುವ ಸಮೂಹದ ನೆಚ್ಚಿನ ಒಲವು ಮೈಗೂಡಿಸಿಕೊಂಡು ಯಲ್ಲಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತ ಪಕ್ಷದ ಚಟುವಟಿಕೆಗೆ ಮತ್ತು ಮತದಾರರ ಕಷ್ಟ ಸುಖಃ ಗಳಿಗೆ ಸ್ಪಂದಿಸುತ್ತಾ ಕಾಂಗ್ರೆಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರ ಮನ ಗೆದ್ದಿರುವ ವಿವೇಕ್ ಹೆಬ್ಬಾರ್ ಅವರಿಗೆ ಒಲಿದ ಕೆಪಿಸಿಸಿ ಸದಸ್ಯ ಸ್ಥಾನ ಯುವ ಸಮೂಹದಲ್ಲಿ ಹೊಸ ಸಂಚಲನ ಮೂಡಿಸಿದೆ.

ಭವಿಷ್ಯದ ದಿನಗಳಲ್ಲಿ ಕ್ಷೇತ್ರವ್ಯಾಪ್ತಿಯ ಪಕ್ಷ ಸಂಘಟನೆಗೆ ಶರವೇಗ ದೊರೆಯಲಿದ್ದು ಮಹತ್ವದ ಜವಾಬ್ದಾರಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರಿಗೂ ಆಧೇಶ ಪತ್ರ ನೀಡಿದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರಿಗೆ ಹಾಗೂ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಅವರಿಗೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಮತ್ತು ಜಿಲ್ಲೆಯ ಎಲ್ಲಾ ಶಾಸಕರಿಗೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ ಮೆಣಸುಪಾಲ, ಮುಂಡಗೋಡು ಬ್ಲಾಕ್ ಅಧ್ಯಕ್ಷ ಜ್ಞಾನೇಶ್ವರ್ ಗುಡಿಹಾಳ್ ,ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್ ನಾಯ್ಕ ಹಾಗು ವಿವಿಧ ಘಟಕಗಳ ಪದಾಧಿಕಾರಿ ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರ ವತಿಯಿಂದ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ನನ್ನ ಮೇಲೆ ಭರವಸೆ ಇಟ್ಟು ಮಹತ್ವದ ಕೆಪಿಸಿಸಿ ಸದಸ್ಯತ್ವ ಜವಾಬ್ದಾರಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷರು ಡಿ.ಕೆ ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೂ ಮತ್ತು ರಾಷ್ಟ್ರ ರಾಜ್ಯದ ನಾಯಕರಿಗು ಜಿಲ್ಲೆಯ ಶಾಸಕರಿಗೂ ಜಿಲ್ಲಾಧ್ಯಕ್ಷರಿಗು ಯಲ್ಲಾಪುರ, ಮುಂಡಗೋಡು, ಬನವಾಸಿ ಬ್ಲಾಕ್ ಅಧ್ಯಕ್ಷರು ಪದಾಧಿಕಾರಿಗಳಿಗು ಕೃತಜ್ಞತೆ ಸಲ್ಲಿಸುತ್ತೇನೆ. ಭವಿಷ್ಯದಲ್ಲಿ ಕ್ಷೇತ್ರದಾದ್ಯಂತ‌ ಸಂಚರಿಸಿ ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹದ ಪ್ರೋತ್ಸಾಹದಲ್ಲಿ, ಕಾರ್ಯಕರ್ತರೊಂದಿಗೆ ಬೆರೆತು ಪ್ರಭಲವಾದ ಸಂಘಟನೆಗೆ ತೊಡಗಿಕೊಳ್ಳುತ್ತೇನೆ ನಿಮ್ಮೆಲ್ಲರ ಆಶಿರ್ವಾದ ವಿರಲಿ.