ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜ್ಯದಲ್ಲಿ ಇದೀಗ ಮದ್ಯದ ದರ ಏರಿಕೆ ಮಾಡಲಾಗಿದ್ದು, ಇದರಿಂದ ಮದ್ಯ ಪ್ರಿಯರಿಗೆ ಶಾಕ್ ಆಗುವಂತಾಗಿದೆ. ಯಾವಾವ ಮದ್ಯದ ಬೆಲೆ ಎಷ್ಟು ಏರಿಕೆ ಆಗಿದೆ ಎನ್ನುವ ವಿವರ ಇಲ್ಲಿದೆ.

8Pmದರ
ಈ ಮೊದಲು ಒಂದು ಕ್ವಾಟರ್ ಗೆ 100ರೂಪಾಯಿ ಇದ್ದ 8pm ದರ ಇದೀಗ 123 ಆಗಿದ್ದು, ಒಂದು ಕ್ವಾಟರ್ ಮೇಲೆ 23ರೂಪಾಯಿ ಏರಿಕೆಯಾಗಿದೆ.

Bp ದರ
ಇನ್ನೂ 123ರೂಪಾಯಿಗೆ ಒಂದು ಕ್ವಾಟರ್ ಆಗಿದ್ದ Bp ಈಗ 160 ರೂಪಾಯಿ ತಲುಪಿದ್ದು Bp ಒಂದು ಕ್ವಾಟರ್ ಮೇಲೆ 37ರೂಪಾಯಿ ಏರಿಕೆಯಾಗಿದೆ.

Ot ದರ
ಅದೆ ರೀತಿ 100ರೂಪಾಯಿಗೆ ಸಿಗುತ್ತಿದ್ದ OT 123 ರೂಪಾಯಿ ಆಗಿದ್ದು, ಇದರ‌ ಮೇಲೂ 23 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಮದ್ಯಮ ವರ್ಗದ ಮದ್ಯಪ್ರಿಯರಿಗೆ ಬಿಗ್ ಶಾಕ್ ಆಗಿದೆ..ಇವೇಲ್ಲವೂ ಬಾರ್ ಹಾಗೂ ವೈನ್ ‌ಶಾಪ್ ಗಳಲ್ಲಿ ಸಿಗಬಹುದಾಗಿರುವ ದರವಾಗಿದೆ.

ಇನ್ನೂ ಇದನ್ನೆ ಬೇರೆ ಎಲ್ಲಾದ್ದರೂ ಖರೀದಿ ಮಾಡಿದರೆ ಇನ್ನಷ್ಟು ದುಬಾರಿ ಆಗುವ ಸಾಧ್ಯತೆ ಕೂಡ ಇದೆ. ಮಧ್ಯದ ದರದಲ್ಲಿ ಭಾರೀ ಏರಿಕೆ ಮಾಡಿರುವುದು ಮುಂದಿನ ದಿನದಲ್ಲಿ ಕಳ್ಳಬಟ್ಟಿ ಮದ್ಯದ ವ್ಯಾಪಾರ ‌ಹೆಚ್ಚಿನ ಪ್ರಮಾಣದಲ್ಲಿ ತಲೆ ಎತ್ತುವ ಸಾಧ್ಯತೆ ಇದೆ ಎಂದು ಮದ್ಯ ಪ್ರಿಯರೆ ಆಡಿಕೊಳ್ಳುತ್ತಿದ್ದಾರೆ