www.suddibindu.in
ಕಾರವಾರ : Dengue cases crossed One hundred: ಮಳೆಗಾಲ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಜಿಲ್ಲಾದ್ಯಂತ ಡೆಂಗ್ಯೂ ಹಾವಳಿ ಜೋರಾಗಿದ್ದು,ಇದುವರೆಗೆ ಜಿಲ್ಲೆಯಲ್ಲಿ ನೂರು ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು,ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 100 ಡೆಂಗ್ಯೂ ಕೇಸ್ ಪತ್ತೆ ಆಗಿವೆ. ಮಳೆಯಿಂದ ಜನರು ತತ್ತರಿಸಿದ್ದಾರೆ.. ಇದೀಗ ಡೆಂಗ್ಯೂ ಯಿಂದ ಭಯಗೊಂಡಿದ್ದಾರೆ.. ಡೆಂಗ್ಯೂ ಹಾವಳಿಗೆ ಜನರು ಹೈರಾಣಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ
- ಮನೆ ಬೀಗ ಮುರಿದು 40ಗ್ರಾಂ ಚಿನ್ನಾಭರಣ ಕಳ್ಳತನ
- ಅಪ್ರಾಪ್ತ ಬಾಲಕಿಗೆ ಮುತ್ತು ಕೊಟ್ಟ ಆರೋಪದಲ್ಲಿ ಹೆಡ್ಕಾನ್ಸಟೇಬಲ್ ಅಮಾನತ್ತು
- ದಯವಿಟ್ಟು ಕುಮಟಾ-ಶಿರಸಿ ರಸ್ತೆ ಬಂದ್ ಮಾಡಬೇಡಿ : ಭಾಸ್ಕರ್ ಪಟಗಾರ
ಎಲ್ಲೆಲ್ಲಿ ಎಷ್ಟು ಕೇಸ್
ಹೊನ್ನಾವರ ತಾಲೂಕಿನಲ್ಲಿ ಇದುವರೆಗೆ ಅತೀ ಹೆಚ್ಚು 28 ಕೇಸ್ ಪತ್ತೆಯಾಗಿದೆ.ಇನ್ನೂ ಅಂಕೋಲಾ ತಾಲೂಕಿನಲ್ಲಿ 27,ಭಟ್ಕಳದಲ್ಲಿ 11,ಕುಮಟಾದಲ್ಲಿ 9,ಶಿರಸಿಯಲ್ಲಿ 7, ಕಾರವಾರ 6,ಸಿದ್ದಾಪುರದಲ್ಲಿ 5, ಯಲ್ಲಾಪುರ 5,ಮುಂಡಗೋಡ ಹಾಗೂ ಹಳಿಯಾಳ ತಾಲೂಕಿನಲ್ಲಿ ತಲಾ 01ಕೇಸ್ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಡೆಂಗ್ಯೂ ಕೇಸ್ಗಳಲ್ಲಿ ಹೊನ್ನಾವರ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಅಂಕೋಲಾ ಇದ್ದು, ಒಟ್ಟು ಇದುವರೆಗೆ ನೂರು ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ.
ಡೆಂಗ್ಯೂ ಕಂಟ್ರೋಲ್ಗೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಲಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡದಂತೆ ಸ್ವಚ್ಛತೆ ಕಾಪಾಡಿಕೊಳ್ಳಿ. ಸಂಜೆ, ರಾತ್ರಿ ವೇಳೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದೆ.