ಸುದ್ದಿಬಿಂದು ಬ್ಯೂರೋ
ಮಂಡ್ಯ : ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಆಗಿ ಬಂದ ಅಥವಾ ಹೊಸದಾಗಿ ನೇಮಕಗೊಂಡ ಅಧಿಕಾರಿಗೆ ಮೇಲಾಧಿಕಾರಿಗಳು ಚಾರ್ಚ್ ನೀಡುವುದು ಸಹ. ಆದರೆ ಇಲ್ಲಿನ ಪೊಲೀಸ್ ಠಾಣಗೆ ಬಂದ ಮಗಳಿಗೆ ತಂದೆ ತಾನು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್ (ಕರ್ತವ್ಯವದ ಹೊಣೆಗಾರಿಕೆ) ಯನ್ನ ಮಗಳಿಗೆ ನೀಡಿರುವ ಅಪರೂಪದ ಘಟನೆಯೊಂದು ನಡೆದಿದೆ.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಬಿ.ಎಸ್.ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದರು. ಇವರು ಕಾರನಿರ್ವಹಿಸುತ್ತಿದ್ದ ಹುದ್ದೆಗೆ ಅವರ ಪುತ್ರಿ ಬಿ.ವಿ.ವರ್ಷಾ ನೇಮಕಗೊಂಡಿದ್ದಾರೆ.
2022ರ ಬ್ಯಾಚ್ ನಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಬಿ ವಿ ವರ್ಷಾ ಅವರು ಗುಲ್ಬರ್ಗಾದಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಪಿಎಸ್ಐ ಆಗಿ ಕಾರನಿರ್ವಹಿಸಿದ್ದರು.
ಅವರಿಗೆ. ಮೊದಲ ಪೋಸ್ಟಿಂಗ್ ಮಂಡ್ಯದಲ್ಲೇ ಆಗಿದ್ದು, ಅದೂ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಪಿಎಸ್‌ಐ ಪೋಸ್ಟಿಂಗ್ ಪಡೆದಿದ್ದಾರೆ. ಪಿಎಸ್ ಐ ಆಗಿದೆ ಠಾಣೆಗೆ ಬಂದ ಬಿ ವಿ ವರ್ಷಾ ತಂದೆಯಿಂದಲೇ ಪಿಎಸ್‌ಐ ಜಾರ್ಚ್ ಪಡೆದುಕೊಂಡು ವೃತ್ತಿಜೀವನ ಆರಂಭಿಸಿದ್ದಾರೆ.
ಬಿ ಎಸ್ ವೆಂಕಟೇಶ ಅವರು ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2021ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿ. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯ ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದ ಹಿಂದೆ ವರ್ಗಾವಣೆಯಾಗಿ ಬಂದಿದ್ದರು. ಈಗ ತಾನು ನಿರ್ವಹಿಸುತ್ತಿದ್ದ ಹುದ್ದೆಯ ಜಾರ್ಜ್ ಪುತ್ರಿಗೆ ನೀಡಿ ಎಸ್ಪಿ ಕಚೇರಿ ಕರ್ತವ್ಯಕ್ಕೆ ವರ್ಗಾವಣೆಯಾಗಿದ್ದಾರೆ.