ಸುದ್ದಿಬಿಂದು ಬ್ಯೂರೋ
ಕುಮಟಾ :
ಮಹಿಳೆ ಓರ್ವಳನ್ನ‌ ಕೊಲೆ ಮಾಡಿ.ನಿರ್ಜನ ‌ಪ್ರದೇಶದಲ್ಲಿ ಎಸೆದು. ತಾವು ಸೇಫ್ ಆಗಿರಬಹುದು ಅಂದುಕೊಂಡು ಓರ್ವ ಮಹಿಳೆ‌ ಕೊಂದ ಐವರು ಕೊಲೆ ಆರೋಪಿಗಳ‌‌ನ್ನ ಇದೀಗ ಕುಮಟ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೃತಳ ಭಾವ ಮಹೇಶ, ಚಿಕ್ಕಮ್ಮಂದಿರಾದ ಗೌರಮ್ಮ, ನೀಲಮ್ಮ, ಸಂಬಂಧಿ ಅಮಿತ್, ಕಾವ್ಯ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ.

ಇದೆ 17ರಂದು ಮಧ್ಯಾಹ್ನ ಹೊತ್ತಲ್ಲಿ ಕುಮಟ‌ ತಾಲೂಕಿನ ದೇವಿ ಮನೆ‌ಘಟ್ಟದಲ್ಲಿ ಸರಿಸುಮಾರು 32, ವರ್ಷದ ಅಪರಿಚಿತ ಮಹಿಳೆ ಓರ್ವಳ ಶವ ಪತ್ತೆಯಾಗತ್ತೆ. ಇದನ್ನ ಕಂಡ ವ್ಯಕ್ತಿ ಒಬ್ಬರು ತಕ್ಷಣ ಕುಮಟಾ ಪೊಲೀಸರಿಗೆ ವಿಷಯ ತಲುಪಿಸ್ತಾರೆ. ತಕ್ಷಣ ಎಚ್ಚೆತ್ತುಕೊಂಡ ಕುಮಟ ಪೋಲೀಸ್ರು ಮಹಿಳೆಯ ಶವ ಬಿದ್ದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸ್ತಾರೆ.‌ಶವ ಪರಿಶೀಲನೆ ಮಾಡಿದ‌ ನಮ್ಮ‌ ಪೊಲೀಸರು ಇದು ಸಹಜ‌ ಸಾವಲ್ಲ‌.‌ ಇಂದೊಂದು ಕೊಲೆ‌ ಅನ್ನೋ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅವರು ಈ ತೀರ್ಮಾನಕ್ಕೆ ಬರೋದಕ್ಕು ಒಂದು ಕಾರಣ ಇದೆ.

ಹೌದು ಮೃತ ಮಹಿಳೆಯ ಶವದ‌ ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದ ಗುರುತ್ತೊಂದು ಕಾಣಸಿಗತ್ತೆ.‌ಹೀಗಾಗಿ ಪೊಲೀಸರು ಇದು ಕೊಲೆ ಅನ್ನೊ ತೀರ್ಮಾನಕ್ಕೆ‌ ಬಂದಿರತ್ತಾರೆ. ಇಷ್ಟಾದರೂ ಆಕೆ ಯಾರು.? ಎಲ್ಲಿಯವಳು ? ಅನ್ನೊದು ಮೊದಲು ಪತ್ತೆ ಹಚ್ಚೋದು ಪೊಲೀಸರಿಗೆ ಸ್ವಲ್ಪ ಕಷ್ಟವಾಗತ್ತೆ. ಬಳಿಕ ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸ್ತಾರೆ. ಆದರೂ ಆಕೆ‌ ಯಾರು ಅನ್ನೊದು ‌ಗೊತ್ತಾಗಲ್ಲ.‌ ಹೀಗಾಗಿ ಪೊಲೀಸರಿಗೆ ತಲೆ‌ ಬಿಸಿ ಆಗೋದು ಸಹಜ. ಪ್ರಕರಣದ ತನಿಖೆಯಲ್ಲಿರುವಾಗಲ್ಲೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ 32 ವರ್ಷದ ವಿವಾಹಿತ ಮಹಿಳೆ ತನುಜಾ ಎಂಬಾಕ್ಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿ ಬಿಡತ್ತೆ.

ಆ ದೂರಿನಲ್ಲಿ ನೀಡಲಾದ ಪೋಟೋ ಹಾಗೂ ಮೃತ ಪಟ್ಟ ಮಹಿಳೆಯ ಶವ ಪರಿಶೀಲಿಸಿದಾಗ ದೇವಿಮನೆ ಘಟ್ಟದಲ್ಲಿ ಪತ್ತೆಯಾಗಿರುವ ಶವ ತುನುಜಾಳದ್ದೆ ಅನ್ನೊದು ಪೊಲೀಸರಿಗೆ ಪಕ್ಕಾ ಆಗಿಯೇ ಬಿಡತ್ತೆ.ತಕ್ಷಣ ಶಿಗ್ಗಾವಿಗೆ ಹೊರಟ ಕುಮಟ ಪೊಲೀಸರ ತಂಡ ಅಲ್ಲಿಗೆ ಹೋಗಿ ಮೊದಲು ಕೊಲೆಯಾದ ತನುಜಾ ಪತಿಯನ್ನ ವಿಚಾರಣೆ ನಡೆಸ್ತಾರೆ. ಆದರೆ ಆತ ಕೊಲೆ‌ ಮಾಡಿಲ್ಲ ಅನ್ನೊದನ್ನ ಮೇಲ್ನೋಟಕ್ಕೆ ತಿಳಿದುಕೊಂಡ ಪೊಲೀಸರು ಮತ್ತಷ್ಟು ತನಿಖೆ ಮುಂದುವರಿಸ್ತಾರೆ. ಕೊಲೆಯಾದ ತನುಜಾ ಬಗ್ಗೆ ಊರಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ತನುಜಾಳ ನಡತೆ ಬಗ್ಗೆ ಆಕೆಯ ಗಂಡನ ಸಹೋದರ (ಭಾವ) ಶಂಕೆ ವ್ಯಕ್ತ ಪಡಿಸಿ. ಆಗಾಗ ಮನೆಯಲ್ಲಿ ಜಗಳ ಮಾಡತ್ತಾ ಇದ್ದ ಎನ್ನಲಾಗಿದೆ. ಅಷ್ಟೆ ಅಲ್ಲದೆ. ಲೋಹಿತ್ ವಿವಾಹ ಆಗುವ ಮೊದಲು ಒಟ್ಟಿಗೆ ಇದ್ದ ಸಹೋದರರು ನಂತರ ಬೇರೆ ಆಗತ್ತಾರೆ.

ಅತ್ತಿಗೆಯಿಂದಲ್ಲೆ ತಮ್ಮ ಕುಟುಂಬದ ಮಾನ-ಮರ್ಯಾದೆ ಎಲ್ಲವೂ ಹಾಳಾಗಿ ಹೋಗಿದೆ‌. ಆಕೆಗೆ ಏನಾದ್ರೂ ಒಂದು ಗತಿ ಕಾಣಿಸಲೇ ಬೇಕು ಅಂತಾ ಅದೆಷ್ಟೋ ಬಾರಿ ಕೊಲೆಯಾಗಿರೋ ತನುಜಾಳ ಬಾವ ಮಹೇಶ ದೊಡ್ಡಮನಿ ಸಾಕಷ್ಟು ಮಂದಿ ಬಳಿ ಹೇಳಿಕೊಂಡಿರೋದು ಕುಮಟ‌ ಪೊಲೀಸರ ಕಿವಿಗೆ ಬಿಳತ್ತೆ. ಬಳಿಕ ಪೊಲೀಸ್ರು ಮಹೇಶ‌ ನಿಗಾಗಿ ಹುಟುಕಾಟ ನಡೆಸಿ ಅವನಿಗೆ ಎಳೆತಂದ್ದು ವಿಚಾರಣೆ ನಡೆಸಿದಾಗ ತನುಜಾ ಕೊಲೆಯ ಅಸಲಿ ಕಥೆ ಹೊರಬಂದಿದೆ.

ತನುಜಾ ಕೊಲೆಯ ಅಸಲಿ ಕಥೆ ಏನು..?

ಕೊಲೆಯಾದ ತನುಜಾ ಐದು ವರ್ಷದ ಹಿಂದೆ ಚಿಕ್ಕಮಲ್ಲೂರು ಗ್ರಾಮದ ಲೋಹಿತ್ ಜೊತೆ ವಿವಾಹ ವಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದು ಗ್ರಾಮದ ಸಮೀಪದಲ್ಲಿ ಇರುವ ಗಾಮೆರ್ಂಟ್ಸ್ ಒಂದರಲ್ಲ ಗಂಡ ಹೆಂಡತಿ ಕೆಲಸ ಮಾಡುತ್ತಿದ್ದರು. ತನುಜಾ ಕೆಲ ದಿನಗಳಿಂದ ಪರ ಪುರುಷರ ಸಂಭಂದ ಬೆಳೆಸಿದ್ದು ಈ ವಿಚಾರ ಪತಿ ಲೋಹಿತ್ ಕುಟುಂಬಕ್ಕೆ ತಿಳಿದಿತ್ತು. ಅನೈತಿಕ ಸಂಭಂದದಲ್ಲಿ ತೊಡಗದಂತೆ ಕುಟುಂಬಸ್ಥರು ಯಲ್ಲಮ್ಮನಿಗೆ ತಿಳಿಸಿದ್ದರು ಆಕೆ ಬಿಟ್ಟಿರಲಿಲ್ಲ ಎನ್ನಲಾಗಿದೆ. ಯಲ್ಲಮ್ಮನ ಪತಿ ಲೋಹಿತ್ ಕುಡಿತದ ದಾಸನಾಗಿದ್ದು ಆತ ಈ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಂಡಿರಅಲ್ಲ ಎನ್ನಲಾಗಿದೆ.

ಇದೇ ರೀತಿ ಆದರೆ ಇಡೀ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ತನುಜಾ ಕೊಲೆ ಮಾಡಲು ಲೋಹಿತ್ ಕುಟುಂಬಸ್ಥರು ನಿರ್ಧಲಿಸಿದ್ದರು. ಜೂನ್ 16 ರ ರಾತ್ರಿ ಮಾಂಸಹಾರ ಅಡುಗೆಯ ಊಟವನ್ನ ಮನೆಯಲ್ಲಿ ನಿಗಧಿ ಮಾಡಿ ತನುಜಾ ಹಾಗೂ ಲೋಹಿತ್ ನನ್ನ ಕರೆಸಿದ್ದರು. ರಾತ್ರಿ ಊಟದಲ್ಲಿ ತನುಜಾಳಿಗೆ ನಿದ್ರೆ ಮಾತ್ರೆಯನ್ನ ಹಾಕಿ ಕೊಟ್ಟಿದ್ದು ಊಟದ ನಂತರ ತನುಜಾ ಗಾಡನಿದ್ರೆಗೆ ಜಾರಿದಾಗ ಆಕೆಯ ಕತ್ತನ್ನ ಹಿಚುಕಿ ಕೊಲೆ ಮಾಡಿದ್ದರು. ಕೊಲೆಯಾದ ನಂತರ ಲೋಹಿತ್ ಸಹೋದರ ಆರೋಪಿ ಕಾವ್ಯ ಎನ್ನುಬಾಕೆಯ ಪತಿ ಮುಂಡಗೋಡಿನ ಅಮಿತ್ ಎನ್ನುವವನ ಟ್ರಾಕ್ಸ್ ವಾಹನದಲ್ಲಿ ಶವವನ್ನ ಹಾಕಿಕೊಂಡು ಆರೋಪಿತರು ಶಿರಸಿ ಕಡೆಗೆ ಬಂದಿದ್ದರು.

ದೇವಿಮನೆ ಘಟ್ಟ ಪ್ರದೇಶದಲ್ಲಿ ರಾತ್ರಿ ವೇಳೆ ಶವವನ್ನ ಎಸೆದು ವಾಪಾಸ್ ಊರಿಗೆ ಹೋಗಿದ್ದರು. ಬೆಳಗ್ಗೆಯಾದ ನಂತರ ಪತಿ ಎಚ್ಚರಗೊಂಡಾಗ ನಿನ್ನ ಪತ್ನಿ ರಾತ್ರಿ ತವರು ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದರು. ಪತ್ನಿ ತವರು ಮನೆಗೆ ಹೋಗದೆ ಇರುವ ವಿಚಾರ ತಿಳಿದಾಗ ಪತಿ ಲೋಹಿತ್‌ ಶಿಗ್ಗಾವಿ ಪೊಲೀಸ್ ಠಾಣೆಯನ್ನ ನಾಪತ್ತೆ ಪ್ರಕರಣ ದಾಖಲಿಸಿದ್ದು, ಸದ್ಯ ಇದೇ ಪ್ರಕರಣದ ಸಹಾಯದಿಂದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ