ಸುದ್ದಿಬಿಂದು ಬ್ಯೂರೋ
ಕುಮಟಾ :
ಈಗಾಗಲೆ ಕಾಂಗ್ರೆಸ್ ತಮ್ನ ಪಕ್ಷದ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನ ಬಿಡುಗಡೆಗೆ ಮಾಡಿದ್ದು, ಕುಮಟಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಆಗುತ್ತದೆ ಅದರ ಮೇಲೆ ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ‌ಫೈನಲ್ ಆಗಲಿದೆ.

ಕಾಂಗ್ರೆಸ್ ಇಂದು ಇನ್ನೂಳಿದ 100ಅಭ್ಯರ್ಥಿಗಳ ಪೈಕ್ ಕೇವಲ 42ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳ ಹೆಸರನ್ನ ಅಂತಿಮಗೊಳಿಸಿದೆ. ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಹೆಸರನ್ನ ಘೋಷಣೆ ಮಾಡಿತ್ತು.

ಆದರೆ ಇಂದು ಮೂರರಲ್ಲಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಮಾತ್ರ ಘೋಷಣೆ ಮಾಡುವ ಮೂಲಕ ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನ ಕಾಯ್ದಿರಿಸಿಕೊಂಡಿದೆ. ಕುಮಟಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಸ್ಥಳೀಯರಾಗಿರುವ ಮಂಜುನಾಥ ಎಲ್ ನಾಯ್ಮ ಹಾಗೂ ‌ನಿವೇದಿತ್ ಆಳ್ವ ಟಿಕೆಟ್ ಗಾಗಿ ಪ್ರಭಲ ಪೈಪೋಟಿ ನಡೆಸುತ್ತಿದ್ದಾರೆ‌‌.

ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮಂಜುನಾಥ ನಾಯ್ಕ ಅವರ ಹೆಸರನ್ನ ಏನಾದ್ರೂ ಘೋಷಣೆ ಮಾಡಿದ್ದರೆ, ಮಂಗಳೂರು ದಕ್ಷಿಣ ಕ್ಷೇತ್ರದ ಕೈ ಟಿಕೆಟ್ ಲೋಬೋ ಅವರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪದ್ಮರಾಜ್ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಲ್ಲಿ‌ ಕುಮಟಾ ಕ್ಷೇತ್ರದಲ್ಲಿ ನಿವೇದಿತ್ ಆಳ್ವ ಅವರನ್ನೆ ಹೈಕಮಾಂಡ ಕಣಕ್ಕಿಳಿಸುವುದು ಪಕ್ಕಾ ಎನ್ನಲಾಗತ್ತಾದೆ. ಈ ಎರಡು ಕ್ಷೇತ್ರದಲ್ಲಿಯೂ ಸದ್ಯ ಜಾತಿ ರಾಜಕಾರಣದ ಲೆಕ್ಕಾಚಾರ ನಡೆಯುತ್ತಿದ್ದು, ಕಾಂಗ್ರೆಸ್ ಹೈಕಮಾಂಡಗೆ ಸದಕ್ಕಂತೂ ದೊಡ್ಡ ತಲೆನೋವಾಗಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಲೋಬೋ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದರೆ.. ಇನ್ನೂ ಪದ್ಮ ರಾಜ್‌ ಈಡಿಗ(,ಬಿಲ್ಲವ) ಸಮಾಜಕ್ಕೆ ಸೇರಿದವರಾಗಿದ್ದಾರೆ‌. ಇನ್ನೂ ಇನ್ನೂ ಇತ್ತ ಕುಮಟಾ ಕ್ಷೇತ್ರದಲ್ಲಿಯೂ ಅದೆ ಪರಿಸ್ಥಿತಿ ಉಂಟಾಗಿದ್ದು, ಮಂಜುನಾಥ ನಾಯ್ಕ ,ನಾಮಧಾರಿ‌ (ಈಡಿಗ) ಸಮಾಜವರಾಗಿದ್ದರೆ, ನಿವೇದಿತ್ ಆಳ್ವ ಕ್ರಿಶ್ಚಿಯನ್ ಸಮುದಾಯವರಾಗಿದ್ದಾರೆ. ಹೀಗಾಗಿ ಈ ಎರಡು ಕ್ಷೇತ್ರದಲ್ಲಿ ಅಳೆದು ತೂಗಿ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ ಮುಂದಾಗಿದೆ.