ಸುದ್ದಿಬಿಂದು ಬ್ಯೂರೋ
ಜೋಯಿಡಾ
: ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಓರ್ವನ ಮೇಲೆ ಕರಡಿ ದಾಳಿ ನಡೆಸಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿಂಬೋಲಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ವಿಠ್ಠು ಶೆಳಕೆ (70) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಹೋಗಲು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ದಾಳಿ ನಡೆಸಿದ ಕರಡಿ ವ್ಯಕ್ತಿಯ ಮೈಮೇಲೆ ಹಾರಿ ದೇಹವನ್ನ ಹರಿದಿದೆ.

ಕರಡಿ ದಾಳಿಯಿಂದ ವಿಠ್ಠು ಶೆಳಕೆ ಕಣ್ಣು ಕಿತ್ತು ಹೋಗಿದೆ. ಕರಡಿ ದಾಳಿ ನಂತರದಲ್ಲಿವಿಠ್ಠು ಶೆಳಕೆ ಸುಮಾರು ಎರಡು ಕಿ.ಮಿ ನಡೆದುಕೊಂಡೆ‌‌ ಮನೆಗೆ ಬಂದಿದ್ದಾರೆ.ಗಂಭೀರ ಗಾಯಗೊಂಡಿದ್ದಾತನಿಗೆ ರಾಮನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ.ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.