suddibindu. in
ಕಾರವಾರ :ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿದ್ದ ಸಿದ್ದಿ ಸಮೂದಾಯದ ಮಹಿಳಾ ಸಂಘಟನೆಯ ಹೋಂ ಸ್ಟೇ ಒಂದರಲ್ಲಿ ಅವ್ಯವಹಾರ ನಡೆದಿದೆ ಎಂದು ಪಶ್ನಿಸಿದಕ್ಕೆ ಯಲ್ಲಾಪುರ (Yallapur)ಪೊಲೀಸ್ (bus stop,) ಠಾಣೆಯ ಕೂಗಳತೆಯ ದೂರದ ಸಾರ್ವಜನಿ ಸ್ಥಳದಲ್ಲಿ ಮಹಿಳೆಯರೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ (assault) ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಗೆ ಹೆಸರು ಸೇರ್ಪಡೆ ಸರ್ವರ್ ಕಾಟ
ರಾಜೇಶ್ವರಿ ಸಿದ್ದಿ ಎಂಬ ಸಾಮಾಜಿಕ ಕಾರ್ಯಕರ್ತೆ ಮಹಿಳೆ ಮೇಲೆ ಪಟ್ಟಣದ ಬಸ್ ನಿಲ್ದಾಣದ(bus stop)ಬಳಿ ರಾಜೇಶ್ವರಿ ಸಿದ್ದಿ ಇದ್ದಾರೆ ಎನ್ನುವುದನ್ನ ಖಾತ್ರಿ ಪಡಿಸಿಕೊಂಡ ಹತ್ತಕ್ಕೂ ಹೆಚ್ಚು ಮಹಿಳೆಯರು ಅಲ್ಲಿಗೆ ತೆರಳಿ ಓರ್ವ ಮಹಿಳೆಗೆ ಸಾರ್ವಜನಕ ಸ್ಥಳದಲ್ಲೇ ಆಕೆಯ ಬಟ್ಟೆ ಬಿಚ್ಚಿ ಮನ ಬಂದ ಹಾಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸ್ ರೆ ಹಲ್ಲೆಗೆ ಒಳಗದ ಮಹಿಳೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೂ ಕೂಡ ಘಟನೆ ಆಗಿರುವ ಬಗ್ಗೆ ಮಾತ್ರ ಯಲ್ಲಾಪುರ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ. ಯಲ್ಲಾಪುರ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್ವರಿ ನಂತರದಲ್ಲಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಬಗ್ಗೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಘಟನೆ ಸಂಬಂಧ ಒಟ್ಟೂ 16ಮಹಿಳೆಯರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆ ಕಾರಣ ಏನು.?
ಕಳೆದ ಒಂದು ವಾರದ ಹಿಂದೆ ಯಲ್ಲಾಪುರದಲ್ಲಿ ಸಿದ್ದಿ ಸಮೂದಾಯದ ಮಹಿಳಾ ಸಂಘಟನೆಯರ ಹೋಂ ಸ್ಟೇ ಉದ್ಘಾಟನೆಗೊಂಡಿದೆ.ಹೋಂ ಸ್ಟೇ(home stay) ನಿರ್ಮಾಣದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ ಎಂದು ರಾಜೇಶ್ವರಿ ಸಿದ್ದಿ ಧ್ವನಿ ಎತ್ತಿದ್ದರು.ಇನ್ನೂ ರಾಜೇಶ್ವರಿ ಈ ಮೊದಲು ಅದೆ ಸಂಘಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಕೂಡ ಆಗಿದ್ದಳು. ರಾಜಶ್ವೇರಿ ಮತ್ತು ಇನ್ನುಳಿದ ಸಿದ್ದಿ ಮಹಿಳೆಯರ ನಡುವೆ ಶುರುವಾದ ಉಂಟಾಗಿತ್ತು..ಹೋಂ ಸ್ಟೇ ಮತ್ತು ಸಮೂದಾಯ ಪ್ರವಾಸೋದ್ಯಮ(Tourism)ವಿಚಾರದಲ್ಲಿ ರಾಜೇಶ್ವರಿ ಸಿದ್ದಿ ನೇರಾನೇರವಾಗಿ ಮಾತಾಡುತ್ತಿದ್ದು ಇದೆ ಕಾರಣಕ್ಕೆ ಉಳಿದ ಮಹಿಳೆಯರು ರಾಜೇಶ್ವರಿಯನ್ನ ದ್ವೇಷ ಮಾಡುತ್ತಿದ್ದರು.ಈ ಕಾರಣದಿಂದಲೇ ಹತ್ತಕ್ಕೂ ಹೆಚ್ಚು ಸಿದ್ದಿ ಮಹಿಳೆಯರು ರಾಜೇಶ್ವರಿ ಮೇಲೆ ಹಲ್ಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆ ನಡೆಸಿರುವ ವಿಡಿಯೋ ವೈರಲ್
ಯಲ್ಲಾಪುರ ಬಸ್ ನಿಲ್ದಾಣದ ಬಳಿ ರಾಜೇಶ್ವರಿ ಸಿದ್ದಿ ಅವರ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಮಹಿಳೆಯರು ಸೇರಿ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್(video viral,)ಆಗಿದೆ. ಓರ್ವ ಮಹಿಳೆಯನ್ನ ನಡುಬೀದಿಯಲ್ಲಿ ಕೊಲೆ ಮಾಡುವ ಹಂತಕ್ಕೆ ತಲುಪಿದರು.ಹಲ್ಲೆಯ ವಿಡಿಯೋ ವೈರಲ್ ಆದರೂ ಯಲ್ಲಾಪುರ ಪೊಲೀಸರು ಮಾತ್ರ ಆ ಘಟನೆಗೂ ತಮ್ಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಯಾಕೆ ಸುಮ್ಮನಾದರೂ ಎನ್ನುವ ಮಾತು ಕೇಳಿ ಬರುತ್ತಿದೆ..ಆದರೆ ರಾಜೇಶ್ವರಿ ಸಿದ್ದಿ ಅವರೆ ಏನಾದ್ರೂ ತಪ್ಪು ಮಾಡಿದ್ದರೆ ಆ ಮಹಿಳಯರು ಆಕೆನ್ನ ಕರೆದು ಮಾತುಕತೆ ಮಾಡಬಹುದಾಗಿತ್ತು.ಆದರೆ ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡಿರುವುದು ಸರಿಯಾದ ಮಾರ್ಗವಲ್ಲ..ಪೊಲೀಸರು ಸಹ ವಿಚಾರ ಗೊತ್ತಾದ ಬಳಿಕ ಪ್ರಕಣ ದಾಖಲಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.