ಕಾರವಾರ:ಸಾವಿರಾರುರೂಪಾಯಿ ಮುಂಗಡ ನೀಡಿ ಬಸ್ ಪಾಸ್ ಪಡೆಯುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಲ ಸಾರಿಗೆ ಬಸ್ ಚಾಲಕ, ನಿರ್ವಾಹಕರು ಬಸ್‌ಗೆ ಹತ್ತಿಸಿಕೊಳ್ಳದೆ ತೊಂದರೆ ನೀಡುತ್ತಿದ್ದು, ಈಗಿನ ಪರೀಕ್ಷಾ ಸಮಯದಲ್ಲಿ ಇದು ಪಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಂಕೋಲಾದ ಹಟ್ಟಿಕೇರಿ, ಅವರ್ಸಾ, ಕಾರವಾರದ ಅಮದಳ್ಳಿ, ಬಿಣಗಾ ಸೇರಿದಂತೆ ಅನೇಕ ಕಡೆಗಳಿಂದ ಶಾಲಾ-ಕಾಲೇಜಿಗಾಗಿ ಜಿಲ್ಲಾಕೇಂದ್ರ ಆಗಮಿಸುತ್ತಾರೆ.ಪಾಲಕರು ರೂಪಾಯಿ ವಿದ್ಯಾರ್ಥಿಗಳು ಕಾರವಾರಕ್ಕೆ ಇಂಥವರಿಗೆ ಸಾವಿರಾರು ಮುಂಚಿತವಾಗಿ ಸಾರಿಗೆ ಇಲಾಖೆಗೆ ತುಂಬಿ ಬಸ್ ಪಾಸ್ ಮಾಡಿಸಿಕೊಟ್ಟು, ತಮ್ಮ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಾರೆ.

ಆದರೆ, ಶಿಕ್ಷಣ ಕಲಿತು ಉತ್ತಮ ಹಂಬಲದಿಂದ ಸ್ಥಾನಕ್ಕೇರಬೇಕೆಂಬ ಅದೆಷ್ಟೋ ಬಡ ವಿದ್ಯಾರ್ಥಿಗಳು ಬೆಳ್ಳಂಬೆಳಿಗ್ಗೆ ಎದ್ದು ತಯಾರಾಗಿ ಬಸ್ ಹಿಡಿದು ಹೆದ್ದಾರಿಯ ಬದಿಗೆ ನಿಂತು ಬಸ್‌ಗಳಿಗೆ ಕೈ ಮಾಡಿದರೆ ಸಾರಿಗೆ ಬಸ್ ಚಾಲಕ, ನಿರ್ವಾಹಕರು ಮಾತ್ರ ಪಾಸ್ ಇರುವ ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ ಆರೋಪ ಕೇಳಿಬಂದಿದೆ.

ಇದರಿಂದಾಗಿ ಪರೀಕ್ಷಾ ಅವಧಿಯಾಗಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜಿನ ಅವಧಿಗೆ ತಲುಪಲು ತೊಂದರೆ ಉಂಟಾಗುತ್ತಿದ್ದು, ಮುಂಗಡ ಹಣ ಪಡೆಯುವ ಸಾರಿಗೆ ಇಲಾಖೆ ಈ ವಿದ್ಯಾರ್ಥಿಗಳಿಗೆ ವಂಚನೆ ಎಸಗುತ್ತಿರುವುದು ಪಾಲಕರ ಅಸಮಾಧಾನಕ್ಕೂ ಕಾರಣವಾಗಿದೆ.