ಸುದ್ದಿಬಿಂದು ಬ್ಯೂರೋ
ಅಂಕೋಲಾ:
ರಾಷ್ಟ್ರೀಯೊಂದರಲ್ಲಿ ಚಲಿಸುತ್ತಿದ್ದ ಓಮ್ನಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗ ಓಮ್ನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಳೆಗುಳಿ ಸಮೀಪ ನಡೆದಿದೆ.

ಮುರುಡೇಶ್ವರದಿಂದ ಗೋವಾ ಕಡೆ ಚಲಿಸುತ್ತಿದ್ದಾಗ ಓಮ್ನಿ ಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಹೊಗೆ ಕಾಣಿಸಿಕೊಂಡಿದ್ದು, ಹೊಗೆ ಕಾಣಿಸಿರುವುದನ್ನ ಗಮನಿಸಿದ ಚಾಲಕ ತಕ್ಷಣ ಹೆದ್ದಾರಿ ಪಕ್ಕದಲ್ಲಿ ಓಮ್ನಿಯನ್ನ ನಿಲ್ಲಿಸಿದ್ದಾನೆ. ಆತ ಓಮ್ನಿ ನಿಲ್ಲಿಸಿದ್ದೆ‌ ತಡ ದೊಡ್ಡ‌ಮಟ್ಟದಲ್ಲಿ‌ ಹೊತ್ತಿಕೊಂಡು ಓಮ್ನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸುದ್ದಿ‌ತಿಳಿದ ಅಂಕೋಲಾದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಓಮ್ನಿಗೆ ಹೊತ್ತಿಕೊಂಡ ಬೆಂಕಿಯನ್ನ ನಂದಿಸಿದ್ದಾರೆ. ಇನ್ನೂ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಕೆಲ ಸಮಯ ಹೆದ್ದಾರಿಯಲ್ಲಿ ಉಳಿದ ವಾಹನಗಳ ಸಂಚಾರಕ್ಕೆ ಸ್ಥಗಿವಾಗಿತ್ತು..ಈ ಬಗ್ಗೆ ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.