Rameswaram Cafe Bomb Blast Case
suddibindu.in
Bhatkl: ಭಟ್ಕಳ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ(Rameswaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ ತಂಡ)(NIA Team)ಭಟ್ಕಳಕ್ಕೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೂರು ಜನ ಅಧಿಕಾರಿಗಳು ಇರುವ ತಂಡವು ತಲೆಮರೆಸಿಕೊಂಡಿರುವ ಶಂಕಿತ ಉಗ್ರ, ಇಂಡಿಯನ್ ಮುಜಾಹಿದ್ದೀನ್(Indian Mujahideen)ಸಹ ಸಂಸ್ಥಾಪಕ ಇಕ್ಬಾಲ್ ಭಟ್ಕಳ್ ಮನೆಗೆ ಭೇಟಿ ನೀಡಿದೆ. ಭಟ್ಕಳದ ತಕಿಯಾ ಸ್ಟ್ರೀಟ್ ನಲ್ಲಿರುವ ಇಕ್ಬಾಲ್ ಭಟ್ಕಳ ಮನೆಗೆ ಭೇಟಿ ನೀಡಿದೆ. ಇಕ್ಬಾಲ್ ಭಟ್ಕಳ್ ಮಗನನ್ನು ವಿಚಾರಿಸಿದ ಎನ್ಐಎ ಅಧಿಕಾರಿಗಳು ವಿಚಾರಣೆ ಸಂಬಂಧ ಬೆಂಗಳೂರಿಗೆ ಬರುವಂತೆ ನೋಟಿಸ್ ನೀಡಿ ತೆರಳಿದೆ.
ಇದನ್ನೂ ಓದಿ:
- ಆರ್ಟಿಐ ಹೆಸರಿನಲ್ಲಿ ಕೋಟಿ ಹಣದ ಬೇಡಿಕೆ: ಮುಂಡಗೋಡ-ಹುಬ್ಬಳ್ಳಿ ಗ್ಯಾಂಗ್ ಪೊಲೀಸ್ ಬಲೆಗೆ..!
- ಐದು ವರ್ಷ ಅಪಘಾತವಿಲ್ಲ.!ಭಟ್ಕಳದ ಚಾಲಕ ರಾಮಚಂದ್ರ ನಾಯ್ಕ ಅವರಿಗೆ ಬೆಳ್ಳಿ ಪದಕದ ಗೌರವ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
ಬಾಂಬ್ ಸ್ಫೋಟ ನಂತರ ಬೆಂಗಳೂರಿನ ಸುಜಾತ ಸರ್ಕಲ್ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದ.ನಂತರ ತುಮಕೂರಿನಿಂದ ಬಳ್ಳಾರಿಗೆ ಬಸ್ನಲ್ಲಿ ಬಂದು ತದ ನಂತರ ಮಂತ್ರಾಲಯ- ಗೋಕರ್ಣ ಬಸ್ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ಎನ್ಐಎ ತಂಡ ಭಟ್ಕಳಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.





