ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಾವಾ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಶರಾವತಿ ಸೇತುವೆ ಮೇಲೆ ನಡೆದಿದೆ.
ಅಪಘಾತದಲ್ಲಿ ಗೋಕರ್ಣ ಸಾಣಿಕಟ್ಟೆ ಸಮೀಪದ ತೊರೆಗಝನಿಯ ಗಣಪತಿ ರಾಮದಾಸ ಹರಿಕಂತ್ರ ಎಂಬುವವರೆ ಅಪಘಾತದಲ್ಲಿ ಮೃತ ಪಟ್ಟಿರುವ ಬೈಕ್ ಸವಾರನಾಗಿದ್ದಾನೆ. ಈತ ಮಂಕಿ ಜಾತ್ರೆಗಾಗಿ ಮಾವನ ಮನೆಗೆ ಹೋದವನು ಜಾತ್ರೆ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಶರಾವತಿ ಸೇತುವೆ ಮೇಲೆ ಅಪರಿಚಿತ ವಾಹನ ಡಿಕ್ಕಿಯಾಗಿದೆ.
ಅಪಘಾತದ ಹಾಟ್ ಸ್ಪಾಟ್ ಆಗುತ್ತಿದೆ ಶರಾವತಿ ಸೇತುವೆ..!
ಹೊನ್ನಾವರದ ಶರಾವತಿ ಸೇತುವೆ ಇದೀಗ ಅಪಘಾತದ ಸ್ಪಾಟ್ ಆಗುತ್ತಿದೆ. ಒಂದೇ ಸೇತುವೆಯ ಮೇಲೆ ದ್ವೀಮುಖ ಸಂಚಾರ ಪದೆ ಪದೆ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆಲ್ಲಾ ಐಆರ್‌ಬಿ ಕಂಪನಿ ನೇರ ಹೊಣೆ ಅಂತಾ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಸೇತುವೆಯ ಮೇಲೆ ಎರಡು ವರ್ಷದ ಹಿಂದೆ ಇಬ್ಬರು ಬೈಕ್ ಸವಾರರು ನದಿಗೆ ಬಿದ್ದಿದ್ದರು, ಅದರಲ್ಲಿ ಓರ್ವ ಮೃತ ಪಟ್ಟಿದ್ದ, ಕಳೆದ ಒಂದು ತಿಂಗಳ ಹಿಂದೆ ಮೂವರು ಯುವಕರು ಮೃತ ಪಟ್ಟಿದ್ದಾರೆ.ಇನ್ನೂ ಇತ್ತಿಚೇಗೆ ಮುರುಡೇಶ್ವರ ಜಾತ್ರೆ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಯುವತಿ ಓರ್ವಳು ಮೃತ ಪಟ್ಟಿದ್ದಾಳೆ,ಇದೀಗ ಮತ್ತೊರ್ವ ಮೃತ ಪಡುವುದರೊಂದಿಗೆ ಶರಾವತಿ ಸೇತುವೆ ಅಪಘಾತ ಹಾಟ್ ಸ್ಪಾಟ್ ಆಗುತ್ತಿದೆ.
ಇದನ್ನೂ ಓದಿ