suddibindu.in
ಶಿರಸಿ: ಅರುಣೋದಯ ಸಂಸ್ಥೆಯಿಂದ ಪ್ರತಿ ವರ್ಷ ಶಿಕ್ಷಕರಿಗೆ ನೀಡಲಾಗುವ ಜಿಲ್ಲಾಮಟ್ಟದ “ಪಾಂಡುರಂಗ” ಪ್ರಶಸ್ತಿಗೆ ಈ ಬಾರಿ ನಾಲ್ವರಿಗೆ ಲಭಿಸಿದೆ.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗಾಗಿ ನೀಡುತ್ತಿರುವ ಈ ಸಾಲಿನ “ಪಾಂಡುರಂಗ” ಪ್ರಶಸ್ತಿಗೆ ನಾರಾಯಣ ಬಿ. ನಾಯ್ಕ,ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಬೈಲ್, ತಾಲೂಕು ಶಿರಸಿ (ಉ.ಕ), ಮಹೇಶ ಎಮ್ ಅಡೇಮನೆ, ದೈಹಿಕ ಶಿಕ್ಷಕರು ಮಾಧ್ಯಮಿಕ ಶಿಕ್ಷಣಾಲಯ ನೀರ್ನಳ್ಳಿ, ತಾಲೂಕ ಶಿರಸಿ (ಉ.ಕ.), ಸುಧಾ ನಾರಾಯಣ ಭಂಡಾರಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಖರ್ವಾ, ತಾಲೂಕ ಹೊನ್ನಾವರ (ಉ.ಕ.) ಹಾಗೂ ಸುದಾಮ ರಾಮಕೃಷ್ಣ ಪೈ, ದೈಹಿಕ ಶಿಕ್ಷಕರು, ಸರ್ಕಾರಿ ಫ್ರೌಡ ಶಾಲೆ, ದೇವನಳ್ಳಿ, ತಾಲೂಕು ಶಿರಸಿ (ಉ.ಕ) ಇವರನ್ನು ಆಯ್ಕೆ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಇವರ ಗಮನಾರ್ಹ ಸೇವೆಯನ್ನು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶ್ರೀಯುತರು ತೋರುತ್ತಿರುವ ವಿಶೇಷ ಕಾಳಜಿಯನ್ನು ಪರಿಗಣಿಸಿ ಅವರನ್ನು ‘ಪಾಂಡುರಂಗ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅರುಣೋದಯ ಸಂಸ್ಥೆಯವರು ಶಿಕ್ಷಕರಾಗಿದ್ದ ಪಾಂಡುರಂಗ ಬಿ. ನಾಯ್ಕ ಇವರ ಹೆಸರಿನಲ್ಲಿ ಕಳೆದ 17 ವರ್ಷಗಳಿಂದ ಜಿಲ್ಲೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಅವರನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸುತ್ತಾ ಬಂದಿದೆ.

ಈ ಪ್ರಶಸ್ತಿಯನ್ನು ಸೆಪ್ಟೆಂಬರ್,5 ರಂದು ಶಿಕ್ಷಕರ ದಿನಾಚರಣೆಯಂದು ಶಿರಸಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅರುಣೋದಯ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ