ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಇಕೋ ಬೀಚ್ ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಅಲೆಗೆ ಸಿಲುಕಿ ಅಪಾಯಕ್ಕೆ ಸಿಲುಕ್ಕಿದ್ದ ಹುಬ್ಬಳ್ಳಿ ಮೂಲದ ಮೂವರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಐವರು ಸ್ನೇಹಿತರು ಸೇರಿಕೊಂಡು ಹೊನ್ನಾವರ ಇಕೋ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಸ್ವಾತಿ (24), ಚೆತಾಲಿ (21),ಸೃಷ್ಟಿ (20) ಎಂಬುವವರು ಅಪಾಯಕ್ಕೆ ಸಿಲುಕಿದ್ದರು. ಅಪಾಯದಲ್ಲಿರುವುದನ್ನ ಗಮನಿದ ಅಲ್ಲೆ ಇದ್ದ ಲೈಪ್ ಗಾರ್ಡ್ ಸಿಬ್ಬಂದಿಗಳಾದ
ಶಶಾಂಕ ಅಂಬಿಗ, ಮಹೇಶ್ ಹರಿಕಂತ್ರ,ಯೋಗೇಶ್ ಅಂಬಿಗ ಮೂವರನ್ನ ರಕ್ಷಣೆ ಮಾಡಿದ್ದಾರೆ.
ಗಮನಿಸಿ