ಬಿಜೆಪಿಯ ಫೈರ್ ಬ್ರಾಂಡ್ (BJP Fire Brand) ಆಗಿದ್ದ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಬಿಜೆಪಿ ವಿರುದ್ದ ಸಾರಿದ ಸಮರ ಅಂತಿಮ ಹಂತಕ್ಕೆ ಬಂದು ನಿಂತಿದೆ. ರಾಜ್ಯ ಬಿಜೆಪಿ ಸಮರ್ಥ ನಾಯಕರಿಲ್ಲದೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದ್ದು, ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಹೇಳುವ ಮೂಲಕ ಒಂದು ಕಾಲು ಹೊರಗಿಟ್ಟಂತಾಗಿದೆ.

ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದ ರೇಣುಕಾಚಾರ್ಯ (MLA Renukacharya,)ರಾಜ್ಯದಲ್ಲಿ ಬಿಜೆಪಿ ಆಸ್ತಿತ್ವ ಉಳಿಯಬೇಕೆಂದರೆ, ಯಡಿಯೂರಪ್ಪನವರಿಗೆ(Yeddyurappa)ಜವಾಬ್ದಾರಿ ನೀಡುವಂತೆ ಆಗ್ರಹಿಸಿದ್ದರು. ಹೀಗೆ ಹೇಳುತ್ತಲೇ ರೇಣುಕಾಚಾರ್ಯ ಕಾಂಗ್ರೇಸ್ಸಿನ(Congress) ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದರು.

ಬಿಜೆಪಿ ವಿರುದ್ಧ ಒಂದೊಂದೆ ಬಾಣ ಸಿಡಿಸುತ್ತ ಬಂದ ರೇಣುಕಾಚಾರ್ಯ, ನವೆಂಬರ ತಿಂಗಳಲ್ಲಿ ಕಾಂಗ್ರೇಸ್ ಸೇರಲಿದ್ದಾರೆ ಎಂದು ಅವರ ಆಪ್ತರು ಮಾತಾಡಿಕೊಳ್ಳುಟ್ಟಿದ್ದಾರೆ. ರೇಣುಕಾಚಾರ್ಯ ಬಹುತೇಕ ಬಿಜೆಪಿ ಬಿಟ್ಟಂತಾಗಿದೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.