ಸುದ್ದಿಬಿಂದು ಬ್ಯೂರೋ
ಕಾರವಾರ : ಹೊಸದಾಗಿ ಆಟೋ ನಿಲ್ದಾಣ‌ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕಾಯ್ಕಿಣಿ ರಸ್ತೆಯಲ್ಲಿ ‌ನಡೆದಿದೆ
.

ಕಳೆದ ಹತ್ತಾರು ವರ್ಷದಿಂದ ನಗರದಲ್ಲಿ ಗೀತಾಂಜಲಿ ಆಟೋ ರಿಕ್ಷಾ ನಿಲ್ದಾಣ ಇದ್ದು,.ಇದರ ಪಕ್ಕದಲ್ಲೆ ಅಂಬೇಡ್ಕರ್ ಹೆಸರಿನಲ್ಲಿ ಆಟೋ ರಿಕ್ಷಾ ನಿಲ್ದಾಣ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಗೀತಾಂಜಲಿ ಆಟೋ ನಿಲ್ದಾಣದ ಚಾಲಕರು ಹಾಗೂ‌ ಮಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸದಾದಿ ಆಟೋ‌ ನಿಲ್ದಾಣವನ್ನ ಮಾಡಲು ನಾಮಫಲಕ ಹಿಡಿದು ಬಂದಾಗ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿ ನಾಮಫಲಕ ಕಿತ್ತು ಹಾಕಿ ಗಲಾಟೆ ಮಾಡಲಾಗಿದ್ದು.ಕೈ ಕೈ ಮಿಲಾಯಿಸುವ ಹಂತದವರೆಗೂ ತಲುಪಿತ್ತು. ಗಲಾಟೆ ನಡೆಯುತ್ತಿದ್ದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಕಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಕುರಿತಾಗಿ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.