ಮುಂಡಗೋಡ: ತಾಲೂಕಿನ ರಾಮಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾನೆ. ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್ ಟ್ರೈಲಿ ಪಲ್ಟಿಯಾಗಿ ದುರಂತ ಸಂಭವಿಸಿದ್ದು ಭೀಕರವಾಗಿದೆ.

ಚಿಗಳ್ಳಿ ಗ್ರಾಮದ ಪ್ರವೀಣ್ ಬಸವರಾಜ್ ಬೆನ್ನೂರ್ (28) ಎಂಬುವವನೇ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದಾನೆ. ಈತ ಇವತ್ತು ಹಾನಗಲ್ಲಿನಿಂದ ಟ್ರ್ಯಾಕ್ಟರ್ ನಲ್ಲಿ ಕಲ್ಲು ತುಂಬಿಕೊಂಡು ಚಿಗಳ್ಳಿ ಗ್ರಾಮಕ್ಕೆ ಅಣ್ಣ ಸೇರಿ ಮೂವರೊಂದಿಗೆ ಬರುತ್ತಿದ್ದ..

ಈ ವೇಳೆ ಪಾಳಾ ಬಳಿಯ ರಾಮಾಪುರ ಕ್ರಾಸ್ ಹತ್ತಿರ ಟ್ರ್ಯಾಕ್ಟರ್ ನ ಟ್ರೈಲಿ ಪಲ್ಟಿಯಾಗಿದೆ. ಹೀಗಾಗಿ, ಟ್ರೈಲಿಯಲ್ಲೇ ಕುಳಿತಿದ್ದ ಪ್ರವೀಣ್ ಮೇಲೆ ಕಲ್ಲುಗಳು ಬಿದ್ದಿವೆ ಎನ್ನಲಾಗಿದ್ದು, ಹೀಗಾಗಿ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ‌.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.