ಸುದ್ದಿಬಿಂದು ಬ್ಯೂರೋ
ಕುಮಟ: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ(Department of Education)ಸಂಘಟಿಸಿದ 2023-24 ನೇ ಸಾಲಿನ 17 ವರ್ಷ ವಯೋಮಿತಿಯ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಪಾವನಿ ನಾಯ್ಕ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕುಮಟಾ ತಾಲ್ಲೂಕು ಹಾಗೂ ಉತ್ತರ ಕನ್ನಡ (Uttarkannada) ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಗದಗದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ವಿಜೇತಳಾಗುವ ಮೂಲಕ ಪಾವನಿ ಈ ಸಾಧನೆ ಮಾಡಿದ್ದಾಳೆ. ಬೆಳಗಾವಿ ವಿಭಾಗದ ಜಿಲ್ಲೆಗಳಾದ ಉತ್ತರಕನ್ನಡ ,ಬಾಗಲಕೋಟೆ ,ಬೆಳಗಾವಿ, ವಿಜಾಪುರ, ಧಾರವಾಡ ,ಚಿಕ್ಕೋಡಿ ,ಗದಗ್ ಹಾಗೂ ಹಾವೇರಿ ಸೇರಿ 8 ಜಿಲ್ಲೆಗಳ ಯೋಗಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪಾವನಿ ನಾಯ್ಕ ಕುಮಟಾ ತಾಲ್ಲೂಕಿನ ಬರ್ಗಿಯ(Bargi) ಶಿಕ್ಷಕ(Teacher)ದಂಪತಿಗಳಾದ ಮೋಹನ ನಾಯ್ಕ ಹಾಗೂ ಪ್ರಭಾವತಿ ನಾಯ್ಕ ಇವರ ಮಗಳಾಗಿದ್ದು ಕುಮಟಾದ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ತನ್ನ ನಿರಂತರ ಅಭ್ಯಾಸದಿಂದ ಪಾವನಿ ಈ ಸಾಧನೆ ಮಾಡಿದ್ದು ಸಿ ವಿ ಎಸ್ ಕೆ ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕ ವರ್ಗದವರು ಹಾಗೂ ಹಿತೈಷಿಗಳು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ. ಹಾಗೂ ರಾಜ್ಯಮಟ್ಟದಲ್ಲಿಯೂ ಚಿನ್ನದ ಪದಕ ಗೆದ್ದು ಬರುವಂತಾಗಲಿ ಎಂದು ಹಾರೈಸಿದ್ದಾರೆ.