ಸುದ್ದಿಬಿಂದು ಬ್ಯೂರೋ
ಕಾರವಾರ: ಮರಳನ್ನು ಅಕ್ರಮವಾಗಿ(Illegal Sand) ಸಾಗಾಟ ಮಾಡುತ್ತಿದ್ದ 3 ಮರಳು ಅಡ್ಡೆಯ ಮೇಲೆ ತಡರಾತ್ರಿ ಉಪವಿಭಾಗಾಧಿಕಾರಿ ಜಯಲಕ್ಷ್ಮ ರಾಯಕೋಡ್( AC Jayalaxma Raikod )ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಕಾರವಾರ(Karwar)ತಾಲೂಕಿನ ಕೆರವಡಿ, ನಂದನಗದ್ದಾ ಉರ್ದು ಶಾಲೆ ಬಳಿ, ಹೊಟೆಗಾಳಿ ಬಳಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ತಹಸೀಲ್ದಾರ್ ಎನ್.ಎಫ್ ನರೋನಾ ಹಾಗೂ ಪೊಲೀಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದರು.

ಈ ವೇಳೆ ಕಾಳಿ ನದಿಯಿಂದ( ತೆಗೆಯಲಾಗಿದ್ದ ಸುಮಾರು 30ಟನ್ ಮರಳು ಹಾಗೂ ಲಾರಿ ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಮಲ್ಲಾಪುರ ಪೊಲೀಸರ ವಶಕ್ಕೆ ಹಾಗೂ ಮರಳನ್ನು(Sand) ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.