ಹೊಸದಿಲ್ಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG ಅನ್ನು ಭೌತಿಕ ರೂಪದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಈ ಹಿಂದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಸಾದ್ ಅವರು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಅಥವಾ ಭೌತಿಕ ರೂಪದಲ್ಲಿ ನಡೆಸುವ ಬಗ್ಗೆ ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.ವ್ಯಾಪಕ ಚರ್ಚೆ ನಂತರ, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) NEET-UG ಪರೀಕ್ಷೆಯನ್ನು ಭೌತಿಕ ರೂಪದಲ್ಲಿ, ಅಂದರೆ OMR ಶೀಟ್ ತುಂಬುವ ಮೂಲಕ ಆಫ್ಲೈನ್‌ನಲ್ಲಿ ನಡೆಸುವ ತೀರ್ಮಾನ ಮಾಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ಒಂದೇ ದಿನ ಶಿಫ್ಟ್ ಆಧಾರದ ಮೇಲೆ ನಡೆಸಲಾಗುವುದು ಎಂದು ತಿಳಿಸಿದೆ.

NEET ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವ ಚರ್ಚೆ ಹೊಸದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹೆಚ್ಚಳದಿಂದ ಈ ವಿಷಯ ಮತ್ತೆ ಪ್ರಮುಖವಾಗಿದೆ

ಇದನ್ನೂ ಓದಿ