ಸುದ್ದಿಬಿಂದು ಬ್ಯೂರೋ
ಖಾಸಗಿ ವಸತಿ ಶಾಲೆಯೊಂದರಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ಓರ್ವ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ.ಇನ್ನೂ ವಿದ್ಯಾರ್ಥಿ ಸಾವಿಗೆ ಶಿಕ್ಷಕರೆ ಕಾರಣ ಎಂದು ಆರೋಪಿಸಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಿಡಿಯು ಖಾಸಗು ಕನ್ನಡ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಚೇತನ್(16) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಚೇತನ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದ ಕಾರಣ ಎರಡು ದಿನಗಳ ಹಿಂದೆ ಚೇತನ್‌ನ ಪಾಲಕರು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಇಂದು ಪರೀಕ್ಷೆ ಇದ್ದ ಹಿನ್ನಲೆಯಲ್ಲಿ ಚೇತನ್ ಶಾಲೆಗೆ ಬಂದಿದ್ದ, ಮೊದಲೆ ಅನಾರೋಗ್ಯದಿಂದಾಗಿ ತುಂಬಾನೇ ಸುಸ್ತಾಗಿದ್ದ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದ ವೇಳೆ ವಾಂತಿ ಮಾಡಿಕೊಂಡಿದ್ದಾನೆ.
ಈ ಕಾರಣಕ್ಕೆ ಶಿಕ್ಷಕರು ಆತನಿಗೆ ಹೊರಗೆ ಕಳುಹಿಸಿ ಶಾಲೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆನ್ನಲಾಗಿದೆ. ಬಳಿಕ ಅದೇ ಶಾಲೆಯಲ್ಲಿ ಕಲಿಯುತ್ತಿರುವ ಚೇತನ್ ಸಹೋದರಿಯನ್ನ ಕರೆಸಿ ಮನೆಯಲ್ಲಿರುವ ತಂದೆ,ತಾಯಿಗೆ ಪೋನ್ ಮಾಡುವಂತೆ ಚೇತನ್ ಹೇಳಿದ್ದಾನಂತೆ. ಮುಖ್ಯಾಧ್ಯಾಪಕರ ಅನುಮತಿ ಇಲ್ಲದೆ ಯಾರಿಗೂ ಪೋನ್ ಮಾಡಲು ಸಾಧ್ಯವಿಲ್ಲ ಎಂದು ಉಳಿದ ಶಿಕ್ಷಕರು ಹೇಳಿದ್ದಾರೆ ಎನ್ನಲಾಗಿದೆ.ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಇರುವ ಕಾರಣ ಚೇತನ್ ಶಾಲೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಗಮನಿಸಿ