ಸುದ್ದಿಬಿಂದು ಬ್ಯೂರೋ
ಶಿರಸಿ
: ಸ್ನಾನಕ್ಕೆ ಹೋಗಿದ್ದ ಯುವತಿ ಓರ್ವಳು ನೀರಿನಲ್ಲಿ ಮುಳುಗಡೆಯಾಗಿ ಮೃತಪಟ್ಟಿರುವ ಘಟನೆ ಹರ್ಲಗುಂಡಿ ಹೊಳೆಯಲ್ಲಿ ನಡೆದಿದೆ.

ಘಟನೆಯಲ್ಲಿ ಧನ್ಯ ಗೌಡ ಕಂಚಾಳ ಮೃತಪಟ್ಟ ಯುವತಿಯಾಗಿದ್ದಾಳೆ.ಮೃತ ಯುವತಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಸ್ನಾನಕ್ಕೆಂದು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಯುವತಿ ನದಿಯಲ್ಲಿ ಬಿದ್ದಿದ್ದಾಳೆ. ನದಿಯಲ್ಲಿ ಆಳವಾಗಿರುವ ಕಾರಣದಿಂದಾಗಿ ಯುವತಿ ಮೃತಪಟ್ಟಿದ್ದಾಳೆ.

ಇನ್ನೂ ಯುವತಿ ಮೃತಪಟ್ಟಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.