ಕುಮಟಾ : ಕಾರೊಂದು ದೂರದಲ್ಲಿ ಬರುತ್ತಿತ್ತು.
ಚುನಾವಣೆ ಸಮಯವಾದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸರು ಕಾರನ್ನು ತಪಾಸಣೆಗೆ ಒಳಪಡಿ ನಿಲ್ಲಿಸಿದರು. ಆದರೆ ಚಾಲಕನ ಸ್ಥಳದಲ್ಲಿ ಕಿರೀಟ ಧರಿಸಿದ್ದ ದೇವತೆಯೊಬ್ಬಳಿದ್ದಳು ! ಹೀಗಾಗಿ ಒಂದು ಕ್ಷಣ ಪೊಲೀಸರು ಬೆಚ್ಚಿ ಬೀಳುವಂತಾಯಿತು.

ಈಗಂತೂ ಯಕ್ಷಗಾನ ಕಲಾವಿದರು ತುಂಬಾ ಬ್ಯುಸಿಯಾಗಿರುತ್ತಾರೆ.ಯಕ್ಷ ರಂಗದ ಹೆಣ್ಣು ವೇಷದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಲಾವಿದ ನಿಲ್ಕೋಡು ಶಂಕರ ಹೆಗಡೆ ಕಾರು ಚಾಲನೆ ಮಾಡುತ್ತಿದ್ದರು. ಸಮಯ ಉಳಿಸುವ ಸಲುವಾಗಿ ಬಣ್ಣದ ವೇಷವನ್ನು ಕಳಚದೆ ಒಂದು ಕಡೆಯಿಂದ ಇನ್ಕೊಂದು ಕಡೆಗೆ ತೆರಳುತ್ತಿದ್ದರು.

ಇದನ್ನ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಚುನಾವಣಾಧಿಕಾರಿಗಳು ಸಹ ಹೆಗಡೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರಂತೆ..”ಅಯ್ಯೋ ದೇವರೇ! ಇದೇನಪ್ಪ ಹೊಸ ಅವತಾರ ಅಂತ ಅಂದುಕೊಳ್ತಿದ್ದಿರಾ?, ಹಾಗೇನಿಲ್ಲ ಕಣ್ರೀ,. ಗುಡೆಯಂಗಡಿ ಮಾದರಿ ಉತ್ಸವವನ್ನು ಮುಗಿಸಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. Already late ಆಗಿದ್ದರಿಂದ Make up ಅಲ್ಲೆ ಕಾರ್ ಡ್ರೈವ್ ಮಾಡಿಕೊಂಡು ಹೊರಟ್ಟಿದ್ದರು.