ಸುದ್ದಿ ಬಿಂದು ನ್ಯೂಸ್ ಡೆಸ್ಕ್
ಬೆಂಗಳೂರು : ಪಾನ್ ಕಾರ್ಡ್ ಗೆ ಆಧಾರ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಇದೆ ಮಾರ್ಚ 31ರ ವರಗೆ ಡೆಡ್ ಲೈನ್ ನೀಡಲಾಗಿತ್ತು. ಆದರೆ ಇದೀಗ ಜೂನ್ 31ರ ವರಗೆ ವಿಸ್ತರಣೆ ಮಾಡಲಾಗಿದೆ.
ಮಾರ್ಚ್ 31ರ ವರಗೆ ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಲಿಂಕ್ ಮಾಡಲು 100 ದಂಡವನ್ನ ನೀಡಬೇಕಿತ್ತು. ಇದರಿಂದ ಸಾಮಾನ್ಯ ಜನರು ಹಣ ಕಟ್ಟಲು ಪರದಾಟ ನಡೆಸುತ್ತಿದ್ದರು. ಇನ್ನೂ ಮಾರ್ಚ್ ,31ರ ಬಳಿಕ ಲಿಂಕ್ ಮಾಡಬೇಕಾದಲ್ಲಿ 5ಸಾವಿರ ದಂಡ ಕಟ್ಟುವಂತೆ ಸೂಚನೆ ನೀಡಲಾಗಿತ್ತು.
ಆದ್ರೆ ಈಗ ಕೇಂದ್ರ ಹಣಕಾಸು ಇಲಾಖೆ ಪಾನ್ ಕಾರ್ಡ್ ಲಿಂಕ್ ಅವಧಿಯನ್ನ ಮಾರ್ಚ್ 31ರ ಬದಲಿಗೆ ಜೂನ್ 31ರ ವರಗೆ ಯಾರೇಲ್ಲಾ ತಮ್ಮ ಪಾನ್ ಕಾರ್ಡ್ ಜೊತೆ ಆಧಾರ ಲಿಂಕ್ ಮಾಡಿಕೊಂಡಿಲ್ಲ ಅದನ್ನ ಮಾಡಿಕೊಳ್ಳಲು ಅವಕಾಶವನ್ನ ನೀಡಿದೆ.
ಆದರೆ ಈ ಹಿಂದೆ ಏನು ಮಾರ್ಚ್ 31ರ ಒಳಗೆ ಯಾರೇಲ್ಲಾ ತಮ್ಮ ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಂಡಿಲ್ಲ ಅವರಿಗೆ ಒಂದು ಸಾವಿರ ದಂಡ ಕಟ್ಟಬೇಕಿತ್ತು. ಅದು ಜೂನ್ ,31ರ ವರೆಗೆ ಒಂದು ಸಾವಿರ ದಂಡಕಟ್ಟಿಯೇ ತಮ್ಮ ಪಾನ್ ಕಾರ್ಡ್ ಜೊತೆ ಆಧಾರ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು. ಹೀಗಾಗಿ ಒಂದು ಸಾವಿರ ರೂಪಾಯಿ ದಂಡದಲ್ಲಿ ಯಾವ ಬದಲಾವಣೆ ಇಲ್ಲ..ಕೇವಲ ದಿನಾಂಕವನ್ನ ಮಾತ್ರ ವಿಸ್ತರಣೆ ಮಾಡಲಾಗಿದೆ ಅಷ್ಟೆ.