ಸುದ್ದಿಬಿಂದು ನ್ಯೂಸ್ ಡೆಸ್ಕ್
ಕುಮಟಾ : ಕ್ಷೇತ್ರದಲ್ಲಿನ ಬಿಜೆಪಿ ಟಿಕೇಟ್ ಪ್ರಹಸನ ಮುಂದುವರೆದಿದ್ದು,ಅತ್ತ ಸಂಘ ಪರಿವಾರದ ಪ್ರಮುಖರು ಟಿಕೇಟ್ ಬದಲಾವಣೆಗಾಗಿ ಪಟ್ಟು ಹಿಡಿದಿದ್ದರೆ ಇತ್ತ ಬಿಜೆಪಿ ನಾಯಕರು ಹಾಲಿ ಶಾಸಕರಿಗೆ ಟಿಕೇಟ್ ನೀಡುವ ಬಗ್ಗೆ ಪಟ್ಟು ಹಿಡಿದಿದ್ದು ಈ ನಡುವೆ ಶಾಸಕ ದಿನಕರ ಶೆಟ್ಟಿ ಅವರು ಹಾಲಿ ಸಿ ಎಂ ಹಾಗೂ ಮಾಜಿ ಸಿ ಎಂ ಅವರನ್ನ ಭೇಟಿ ಮಾಡಿ ಟಿಕೇಟ್ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಗೊಂದಲ ಇನ್ನೂ ಸಹ ಮುಂದುವರೆದಿದೆ.ಹಾಲಿ ಶಾಸಕರನ್ನ ಕೈ ಬಿಟ್ಟು ಸಂಘ ಪರಿವಾರದವರಿಗೆ ಟಿಕೇಟ್ ನೀಡಬೇಕೆಂದು ಆರ್ ಎಸ್ ಎಸ್ ನ ಹಲವು ಹಿರಿಯ ನಾಯಕರು ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಒಂದುವೇಳೆ ಆರ್ ಎಸ್ ಎಸ್ ಮಾತುಕತೆ ಮೇಲುಗೈ ಆದಲ್ಲ ಸುಬ್ರಾಯ ವಾಳ್ಕೆಗೆ ಅವರಿಗೆ ಈ ಬಾರಿಯ ಬಿಜೆಪಿ ಟಿಕೇಟ್ ಸಿಗುವ ಸಾಧ್ಯತೆ. ಇದೆ. ಇನ್ನೂ ಬಿಜೆಪಿ ಮೂಲ ಕಾರ್ಯಕರ್ತರು ಆರ್ ಎಸ್ ಎಸ್ ನ ಅಭ್ಯರ್ಥಿ ಬದಲಾವಣೆ ವಾದವನ್ನ ಬೆಂಬಲಿಸುತ್ತಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.