ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಸೇರಿದಂತೆ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಮಳೆ( Heavy Rain,) ಸುರಿಯುತ್ತಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಯಲ್ಲೋ ಅಲರ್ಟ್(Yellow Alert ) ಘೋಷಣೆ ಮಾಡಲಾಗಿದೆ.

ಉತ್ತರಕನ್ನಡ ಜಿಲ್ಲೆಯ (uttara kannada) ಗಂಗಾವಳಿ, ಕಾಳಿ,ಶರಾವತಿ, ಅಘನಾಶಿನಿ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಅನೇಕ ಗ್ರಾಮಗಳಲ್ಲಿನ ಜನರನ್ನ ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಕದ್ರಾ, ಕೊಡ್ಸಳ್ಳಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನ ಹೊರ ಬಿಡಲಾಗಿದ್ದು, ಕಾಳಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಗಂಗಾವಳಿ ನದಿ ಸಹ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಅಘನಾಶನಿ ನದಿಯಲ್ಲಿಯೂ ನೀರಿನ ಪ್ರಮಾಣ ಅಧಿಕವಾಗಿದ್ದು, ಮಿರ್ಜಾನ,ಹೆಗಡೆ, ಕಾಗಲ ಸೇರಿದಂತೆ ಅನೇಕ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

ಭಾರೀ ಗಾಳಿ ಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಂಬಗಳ ಮೇಲೆ ಮರ ಮುರಿದು ಬಿದ್ದು, ವಿದ್ಯುತ್ ಸಹ ಕೈಕೊಟ್ಟಿದೆ.ಗ್ರಾಮೀಣ ಭಾಗಗದಲ್ಲಿ ವಿದ್ಯುತ್ ಇಲ್ಲದೆ ಮೊಬೈಲ್ ನೆಟವರ್ಕ್ ಸಹ ಸಮಸ್ಯೆ ಆಗಿದೆ. ನಿನ್ನೆ ರಾತ್ರಿಯಿಂದ ಸರಿಯಾಗಿ ಮೊಬೈಲ್ ನೆಟವರ್ಕ್ ಇಲ್ಲದೆ. ಸಂಪರ್ಕ ಸಹ ಕಷ್ಟವಾಗಿತ್ತು.
ಭಾರೀ ಮಳೆಯಿಂದಾಗಿ ಇಂದು ಜುಲೈ 24 ರಂದು ಜಿಲ್ಲೆ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಢಳಿತ ರಜೆ ಘೋಷಣೆ ಮಾಡಿದೆ. ಇಂದು ಸಹ ಮಳೆ ಇದೆ ರೀತಿ ಮುಂದುವರೆದರೆ ನಾಳೆ ಸಹ ಶಾಲಾ-ಕಾಲೇಜಿಗೆ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.