ಸುದ್ದಿಬಿಂದು ಬ್ಯೂರೋ
ಕುಮಟಾ: ಅಯೋಧ್ಯೆಯಲ್ಲಿಂದು ಶ್ರೀರಾಮನ ಪ್ರಾಣ ಪ್ರತಿಷ್ಠಾನೆಯಾಗಿದ್ದು, ದೇಶವೆ ಇಂದು ಶ್ರೀರಾಮನ ಜಪ-ತಪದಲ್ಲಿ ಮುಳುಗೆಳುತ್ತಿದೆ. ಉತ್ತರಕನ್ನಡ ಜಿಲ್ಲೆಯ ಎಲ್ಲಾ ದೇಗುಲದಲ್ಲಿಯೂ ಸಹ ಶ್ರೀರಾಮ ಹೋಮ-ಹವನ ನಡೆಸಲಾಯಿತು.ಈ ಹಿನ್ನಲೆಯಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ‌. ಕುಮಟಾ ತಾಲೂಕಿನ ಬರ್ಗಿಯಲ್ಲಿಯೂ ಕೂಡ ದೀಪೋತ್ಸವ ಆಚರಿಸಲಾಗಿದೆ.

ಬರ್ಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸರಿಸುಮಾರು ಎರಡು ಸಾವಿರಕ್ಕೂ ಅಧಿಕ ದೀಪಗಳನ್ನ ಹಚ್ಚುವ ಮೂಲಕ ದೀಪೋತ್ಸವ ಆಚರಿಸಲಾಯಿತು.ಮಹಿಳೆಯರು,ಪುರುಷರು ಸೇರಿದಂತೆ ಪ್ರತಿಯೊಬ್ಬರು ಸಹ ಈ ದೀಪೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೀಪೋತ್ಸವ ಆಚರಿಸಿ ಸಂಭ್ರಮಿಸಿದರು.

ಇನ್ನೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಹಿನ್ನೆಲಯಲ್ಲಿ ಬೆಳಿಗ್ಗೆಯಿಂದ ಇಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಪೂಜೆ ನೆರವೇರಿಸಲಾಯಿತು. ಇನ್ನೂ ರಾತ್ರಿ ಸ್ಥಳೀಯರಿಂದ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಸಲಾಯಿತು..ದಿನ ಪೂರ್ತಿ ನಡೆದ ಶ್ರೀರಾಮ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಪುನಿತರಾದರು.