ಸುದ್ದಿಬಿಂದು ಬ್ಯೂರೋ
ಬೆಂಗಳೂರು :ಈಗಾಗಲೆ ವಿವಿಧ ಕಂಪನಿಯ ಮದ್ಯದ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಮತ್ತೆ 8-10ರೂಪಾಯಿ ಏರಿಕೆ ಮಾಡಲು ಅಬಕಾರಿ ಇಲಾಖೆ ಚಿಂತನೆ ನಡೆಸಿದ್ದು, ಮದ್ಯಪ್ರಿಯರಿಗೆ ಶಾಕ್ ಎದುರಾಗಲಿದೆ.
ಈ ತಿಂಗಳ ಕೊನೆಯಲ್ಲಿ ಅಥವಾ ಪೆಬ್ರವರಿಯಲ್ಲಿ ಬಿಯರ್ ದರವನ್ನ ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ. ಪ್ರತಿ ಬಿಯರ್ ಮೇಲೆ 8 ರಿಂದ 10ರೂಪಾಯಿ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಒಂದು ವೇಳೆ ದರ ಏರಿಕೆ ಆದಲ್ಲಿ ಎರಡೇ ತಿಂಗಳಲ್ಲಿ ಮದ್ಯದ ಬೆಲೆ ಎರಡನೇ ಬಾರಿ ಏರಿಕೆ ಆಗಲಿದೆ.