ಸುದ್ದಿಬಿಂದು ಬ್ಯೂರೋ

ಕಾರವಾರ: ಮಾಜಿ ಸಚಿವ ಆನಂದ ಅಸ್ನೊಟಿಕರ್ ಡೆಂಗ್ಯೂ ದಿಂದ ಬಳಲುತ್ತಿದ್ದಾರೆ.ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಅಸ್ನೋಟಿಕರ್, ನಿನ್ನೆ ಅಯೋಧ್ಯೆಯಲ್ಲಿ ನಡೆದ ರಾಮಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಹಾಗೂ ಅಂಕೋಲಾದಲ್ಲಿ ಸುನೀಲ ನಾಯ್ಕ ಮತ್ತು ಅವರ ತಂಡ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೂ ಹಾಜರಾಗಲೂ ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ನನ್ನ ಅನುಪಸ್ಥಿತಿಯಾಗಿರುವ ಬಗ್ಗೆ ಅಸ್ನೋಟಿಕರ್ ‌ಕ್ಷಮೆ‌ಕೇಳಿದ್ದು, ಶ್ರೀರಾಮ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಬರೆದುಕೊಂಡಿದ್ದಾರೆ.