suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಹತ್ತಕ್ಕೂ ಹೆಚ್ಚುಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ‌. ಘಟನೆಗೂ ಕೆಲ‌ ನಿಮಿಷಗಳ ಹಿಂದಷ್ಟೆ ಲಾರಿ ಚಾಲಕ ತನ್ನ ಮನೆಯವರಿಗೆ ಪೋನ್ ಮಾಡಿರುವುದೆ ಕೊನೆ ಕರೆಯಾಗಿದೆ.

ಶಿರೂರು ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದಾರೆ.ಈ ನಡುವೆ ಹಳಿಯಾಳದಿಂದ ಕಟ್ಟಿಗೆ ತುಂಬಿಕೊಂಡು ಸಾಗುತ್ತಿದ್ದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಎಂಬಾತ ಅಂದು ಬೆಳಿಗ್ಗೆ 8ಗಂಟೆ ಸುಮಾರಿಗೆ ಅರ್ಜುನ್ ಶಿರೂರಿನಲ್ಲಿರುವ ಲಕ್ಷ್ಮಣ ನಾಯ್ಕ ಅವರ ಹೊಟೋಲ್ ನಲ್ಲಿ ತಿಂಡಿ ತಿನ್ನುತ್ತಿರುವ ವೇಳೆ ಮನೆಯವರಿಗೆ ಪೋನ್ ಕರೆ ಮಾಡಿ ನಾನು ಹಳಿಯಾಳದಿಂದ ಹೊರಟು ಅಂಕೋಲಾದ ಶಿರೂರಿ‌ಗೆ ಬಂದು ತಲುಪಿದ್ದೇನೆ. ಇಲ್ಲ‌ ಲಕ್ಷ್ಮಣ ನಾಯ್ಕ ಅವರ ಹೊಟೇಲ್‌ನಲ್ಲಿ ತಿಂಡಿ ತಿಂದು ಹೊರಡುವುದಾಗಿ ಚಾಲಕ ಅರ್ಜುನ್ ಮನೆಯವರಿಗೆ ತಿಳಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ

ಶಿರೂರು ಗುಡ್ಡ ಕುಸಿತದ ದುರಂತದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಅರ್ಜುನ್ ಕುಟುಂಬದವರು ಸಾಕಷ್ಟು ಬಾರಿ ಆತನಿಗೆ ಕರೆ ಮಾಡಿದ್ದರಂತೆ ಆದರೆ ಎಷ್ಟು ಸಮಯ ಕಳೆದರು ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ‌. ನಂತರದಲ್ಲಿ ಲಾರಿಗೆ ಅಳವಡಿಸಿದ ಜಿಪಿಎಸ್ ಪರಿಶೀಲನೆ ಮಾಡಿದಾಗ ಲಾರಿ ಘಟನಾ ಸ್ಥಳ ಶಿರೂರಿನಲ್ಲೆ ಇರುವುದು ಪತ್ತೆಯಾಗಿದೆ. ಬಳಿಕ ಲಾರಿ ಮಾಲಕ ಹಾಗೂ ಚಾಲಕ ಅರ್ಜುನ್ ಕುಟುಂಬಸ್ಥರು ಈಗ ಶಿರೂರು ಗ್ರಾಮಕ್ಕೆ ಆಗಮಿಸಿದ್ದಾರೆ‌. ಆದರ ಇದುವರೆಗೂ ಅರ್ಜನ್ ಶವ ಪತ್ತೆಯಾಗಿಲ್ಲ. ಇನ್ನೂ ಕಾರ್ಯಚರಣೆ ಇನ್ನೂ ಮುಂದುವರೆದಿದೆ.