suddibindu.in
ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳಕರ್ ಹೆಸರು ಅಂತಿಮಗೊಂಡಿದೆ ಎಂಬ ವಿಷಯ ಪ್ರಸಾರಗೊಳ್ಳುತ್ತಿದ್ದಂತೆ ಜಿಲ್ಲಾದ್ಯಂತ ಬಹುಸಂಖ್ಯಾತ ನಾಮಧಾರಿ ಸಮಾಜದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಪರ್ಧೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಆರ್ ಹೆಚ್ ನಾಯ್ಕ ಹಾಗೂ ಹಿರಿಯ ವಕೀಲ ಜಿಟಿ ನಾಯ್ಕ ಟಿಕೇಟಿಗಾಗಿ ತೀವ್ರ ಸ್ಪರ್ಧೆ ಮಾಡಿದ್ದರು.ಕಾಂಗ್ರೇಸ್ ಪಕ್ಷ ಇವರಾರನ್ನು ಗಣನೆಗೆ ತೆಗೆದುಕೊಳ್ಳದೇ, ನೆರೆಯ ಜಿಲ್ಲೆಯ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 50ಸಾವಿರಕ್ಕಿಂತ ಮಿಕ್ಕಿ ಹೆಚ್ಚಿನ ಮತಗಳಲ್ಲಿ ಸೋತಿರುವ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಅವರನ್ನ ಕಾಂಗ್ರೇಸ್ ಪಕ್ಷ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿರುವುದು ಜಿಲ್ಲೆಯ ನಾಮಧಾರಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ

ಮಾಜಿ ಸಂಸದ ದಿ. ದೇವರಾಯ ನಾಯ್ಕ ಈ ಕ್ಷೇತ್ರದಿಂದ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ ನಂತರ, ಕಳೆದ ಆರು ಚುನಾವಣೆಯಲ್ಲಿಯೂ ನಾಮಧಾರಿ ಸಮಾಜವನ್ನ ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಈ ಬಾರಿ ಕಾಂಗ್ರೇಸ್ ಪಕ್ಷದಿಂದ ನಾಮಧಾರಿ ಸಮಾಜದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಬೇಕೆಂಬ ತೀವ್ರ ಒತ್ತಡ ಹಾಕಲಾಗಿತ್ತು.

ಕಾಂಗ್ರೇಸ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಮತದಾರರಾಗಿರುವ ನಾಮಧಾರಿಗಳನ್ನ ಅಭ್ಯರ್ಥಿ ಆಯ್ಕೆಯಲ್ಲಿ ಕಡೆಗಣಿಸಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳುವುದೆಂಬ ಕೂತುಹಲ ಉಂಟಾಗಿದೆ.