suddibindu.in
Siddapura : ಸಿದ್ದಾಪುರ; ಬುಲೆರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನ ವಶಕ್ಕೆ ‌ಪಡೆದು ಜಾನುವಾರುಗಳನ್ನ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮಾವಿನಗುಂಡಿ ಬಳಿ ನಡೆದಿದೆ‌.

ಕೇಶವ ನಾಯ್ಕ ಹಾಗೂ ಮಹೇಶ ಮರಾಠೆ ಎಂಬುವವರು ತಮ್ಮ ಬುಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶಕ್ಕಾಗಿ ಜಾನುವಾರುಗನ್ನ ಸಾಗಾಟ ಮಾಡುತ್ತಿದ್ದರು. ಈ ವೇಳೆ ತಪಾಸಣೆ ನಡೆಸಿದ ಸಿದ್ದಾಪುರ ‌ಪೊಲೀಸರು ಇಬ್ಬರೂ ಆರೋಪಿಗಳನ್ನ ಹಾಗೂ ಜಾನುವಾರು ಸಾಗಾಟಕ್ಕೆ ಬಳಸಲಾಗಿದ್ದ ವಾಹನವನ್ನ ವಶಕ್ಕೆ ಪಡೆದಿದ್ದು, ಜಾನುವಾರುಗಳನ್ನ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.