ಸುದ್ದಿಬಿಂದು ಬ್ಯೂರೋ ವರದಿ
Karwar:ಕಾರವಾರ: ಈಜಲು ಹೋಗಿ ಅಪಾಯಕ್ಕೆ ಸಿಲುಕ್ಕಿದ್ದ ಇಬ್ಬರೂ ಯುವಕರನ್ನ ರಕ್ಷಣೆ ಮಾಡಿರುವ ಘಟನೆ ಚಿತ್ತಾಕುಲ ಸಮೀಪದ ಹೊಳೆ ಗಜನಿಯಲ್ಲಿ ನಡೆದಿದೆ.
ಇಬ್ಬರೂ ಯುವಕರು ಸೇರಿ ಚಿತ್ತಾಕುಲ ಸಮಿಪದ ಹೊಳೆಯಲ್ಲಿ ಈಜಲು ಹೋಗಿದ್ದರು, ಈ ವೇಳೆ ಅಪಾಯದಲ್ಲಿ ಸಿಲುಕೊಂಡು ಚಿರಾಡುತ್ತಿದ್ದು, ಅದೇ ವೇಳೆ ಅಲ್ಲೆ ಪಕ್ಕದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ದೇವಭಾಗ ರೆಸಾರ್ಟ್ ಸಿಬ್ಬಂದಿ ಪ್ರವೀಣ ಹರಿಕಾಂತ ಎಂಬುವವರು ಮೊಬೈಲ್ ನಲ್ಲಿ ಮಾತನಾಡುತ್ತ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಯುವಕರು ಚಿರಾಡುತ್ತಿರುವುದನ್ನ ಕೇಳಿಸಿಕೊಂಡ ಪ್ರವೀಣ ಹರಿಕಾಂತ ಅವರು ತಕ್ಷಣ ನೀರಿಗೆ ಹಾರಿ ಅಪಾಯದಲ್ಲಿ ಇದ್ದ ಇಬ್ಬರೂ ಯುವಕರನ್ನ ರಕ್ಷಣೆ ಮಾಡಿದ್ದಾರೆ..ಸದ್ಯ ಇಬ್ಬರು ಯುವಕರು ಸುರಕ್ಷತರಾಗಿದ್ದಾರೆ.