ಸುದ್ದಿಬಿಂದು ಬ್ಯೂರೋ ವರದಿ (suddibindu digital news)
Mysuru:ಮೈಸೂರು : ಟೂರಿಸ್ಟ್ ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲನಟ ಮಾಸ್ಟರ್ ರೋಹಿತ್ ಗೆ (Child actor Rohit)ಗಂಭೀರ ಗಾಯಗೊಂಡ ಘಟನೆ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ನಡೆದಿದೆ.
ನಟ ದರ್ಶನ್(actor Darshan)ಅಭಿನಯದ ಕಾಟೇರ ಸಿನಿಮಾದಲ್ಲಿ (Katera Movie)ಅಭಿನಯಿಸಿದ್ದ ಬಾಲನಟ ಮಾಸ್ಟರ್ ರೋಹಿತ್ ಹಾಗೂ ಆತನ ತಾಯಿ ಛಾಯಾಲಕ್ಷ್ಮೀ, ರೋಹಿತ್ ಗೆಳಯ ಹಾಗೂ ಉಪಾನ್ಯಾಸಕರೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಬಾಲಕ ನಟ ರೋಹಿತ್ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಟೂರಿಸ್ಟ್ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನದಲ್ಲಿದ್ದ ಬಾಲ ನಟ ರೋಹಿತ್ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಇದನ್ನೂ ಓದಿ