ಮೇಷ ರಾಶಿ : ಈ ರಾಶಿಯವರಿಗೆ ಇಂದು ಕೆಲವು ಕೆಲಸಗಳು ಮುಂದುಡಲ್ಪಡುತ್ತವೆ.ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ ದೊರೆಯಲಿದೆ. ಹೊಸ ಸಾಲಗಳು ಸಿಗಲಿದೆ.ಉದ್ಯೋಗದಲ್ಲಿ ಸ್ಥಾನ ಚಲನೆ ಸೂಚನೆ ಇದೆ. ಸಂಗಾತಿ ಜೊತೆ ಸಣ್ಣಪುಟ್ಟ ಉಂಟಾಗಲಿದೆ.
ಅದೃಷ್ಟ ಸಂಖ್ಯೆ :6, ಅದೃಷ್ಟ ಬಣ್ಣ : ಬಿಳಿ
ವೃಷಭ ರಾಶಿ : ಕೆಲವು ವಿವಾಧಗಳು ಪರಿಹರವಾಗುವ ಸಾಧ್ಯತೆ ಇದೆ, ಹೊಸ ವಿಷಯದ ಕಡೆ ಹೆಚ್ಚಿನ ಆಸಕ್ತಿ ನೀಡಲಿದ್ದೀರಿ, ವ್ಯಾಪಾರ ಉದ್ಯೋಗದಲ್ಲಿನ ತೊಂದರೆಗಳು ನಿವಾರಣೆ ಆಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲಿದ್ದಾರೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.
ಅದೃಷ್ಟ ಸಂಖ್ಯೆ : 1 , ಅದೃಷ್ಟ ಬಣ್ಞ : ಹಳದಿ
ಮಿಥುನ ರಾಶಿ : ದೂರದ ಬಂಧುಗಳ ಆಗಮನ ಸಂತಸ ತರಲಿದೆ. ವ್ಯಾಪಾರಗಳು ವಿಸ್ತಾರವಾಗಲಿದೆ. ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಹಠಾತ್ ಪ್ರಯಾಣ ಮಾಡುವ ಸಾಧ್ಯತೆ ಇದೆ.ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ದೊರೆಯಲಿದೆ.ರಾಜಕೀಯ ಸಭೆ,ಸಮಾರಂಭದಲ್ಲಿ ಭಾಗವಹಿಸುತ್ತೀರಿ, ಹಳೆ ಸಾಲ ವಸೂಲಿ ಮಾಡಲಾಗುತ್ತದೆ.
ಅದೃಷ್ಟ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ
ಕರ್ಕ ರಾಶಿ : ಮನೆಯಲ್ಲಿ ಅಚ್ಚರಿ ಘಟನೆ ನಡೆಯುತ್ತವೆ,ಸ್ಥಿರಾಸ್ತಿಯ ವಿವಾಧಗಳು ಪರಿಹರಿಸಲಾಗುತ್ತದೆ. ವ್ಯಾಪಾರ ಮೊದಲಿಗಿಂತಲ್ಲಿ ಉತ್ತಮವಾಗಲಿದೆ. ಉದ್ಯೋಗದಲ್ಲಿ ಕೆಲಸದ ಹೊರೆ ಕಡಿಮೆಯಾಗಲಿದೆ.ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಬಾಲ್ಯದ ಗೆಳಯರೊಂದಿಗೆ ಭೋಜನಾ,ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.
ಅದೃಷ್ಟ ಸಂಖ್ಯೆ : 9 ಅದೃಷ್ಟ ಬಣ್ಣ : ಕೆಂಪು
ಸಿಂಹ ರಾಶಿ: ಕುಟುಂಬ ಸದಸ್ಯರ ಜೊತೆಯ ಚರ್ಚೆ ಯಶಸ್ವಿಯಾಗಲಿದೆ. ವ್ಯವಹಾರದಲ್ಲ ಸ್ವಂತ ನಿರ್ಧಾರ ತೆಗೆದುಕೊಳ್ಖುವುದು ಉತ್ತಮ.ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಆರೋಗ್ಯ ಸುಧಾರಿಸಲಿದೆ.ಉದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.
ಅದೃಷ್ಟ ಸಂಖ್ಯೆ : 5 , ಅದೃಷ್ಟ ಬಣ್ಣ:ನೀಲಿ
ಕನ್ಯಾ ರಾಶಿ: ದೇವಸ್ಥಾನಗಳಿಗೆ ಭೇಟಿ ನೀಡಲಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿದೆ.ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗಲಿದೆ.ಸ್ಥಿರಾಸ್ತಿ ಖರೀದಿ ಪ್ರಯತ್ನಗಳು ಫಲ ನೀಡುತ್ತವೆ.ಬಂಧುಗಳೊಂದಿಗೆ ಸೌಹಾರ್ದತೆ ಉಂಟಾಗಲಿದೆ.
ಅದೃಷ್ಟ ಸಂಖ್ಯೆ : 5 , ಅದೃಷ್ಟ ಬಣ್ಣ:ಕೆಂಪು
ತುಲಾ ರಾಶಿ : ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.ಮನೆಯಲ್ಲಿ ಸಮಸ್ಯಾತ್ಮಕ ವಾತಾವರಣವಿರುತ್ತದೆ.ಕೈಗೊಂಡ ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲಸಿಗುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಗೊಂದಲಮಯ ಸನ್ನಿವೇಶಗಳು ಇರುತ್ತವೆ.ದೀಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ದೂರ ಪ್ರಯಾಣ ಮುಂದುಡುವುದು ಉತ್ತಮ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಹಸಿರು.
ವೃಶ್ಚಿಕ ರಾಶಿ: ದೂರದ ಸಂಬಂಧಿಗಳಿಂದ ಶುಭ ಸಮಾಚಾರ ದೊರೆಯುತ್ತದೆ. ಹೊಸ ಪರಿಚಯಗಳು ಉತ್ಸಾಹದಾಯಕವಾಗಿರುತ್ತವೆ. ವ್ಯಾಪಾರ ವ್ಯವಹಾರದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.ಹೊಸ ವಾಹನದ ಯೋಗವಿದೆ. ಭೂವಿವಾಧಗಳು ಬಗೆಹರಿಯುತ್ತವೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳಿರುತ್ತವೆ.
ಅದೃಷ್ಟ ಸಂಖ್ಯೆ : 01, ಅದೃಷ್ಟ ಬಟ್ಟ: ಕೆಂಪು
ಧನು ರಾಶಿ : ವ್ಯವಹಾರದಲ್ಲಿ ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ಸಹೋದರರೊಂದಿಗಿನ ಐಕತ್ಯೆಯ ಕೊರತೆ ಉಂಟಾಗುತ್ತದೆ.ಕುಟುಂಬ ಸದಸ್ಯರೊಂದಿಗೆ ಕೆಲವು ಸಮಸ್ಯೆಗಳು ಇರುತ್ತವೆ.ವ್ಯಾಪಾರ ವ್ಯವಹಾರದಲ್ಲಿ ಕಿರಿಕಿರಿ ಉಂಟಾಗಲಿದೆ. ದೈವಿಕ ಚಿಂತನೆ ಹೆಚ್ಚಾಗಲಿದೆ. ಸಂಬಂಧಿಕರು ಸ್ನೇಹಿತರೊಂದಿಗೆ ಅನಾವಶ್ಯಕ ವಿವಾಧ ಉಂಟಾಗಲಿದೆ.
ಅದೃಷ್ಟ ಸಂಖ್ಯೆ : 5, ಅದೃಷ್ಟ ಬಣ್ಣ : ಬೂದು
ಮಕರ ರಾಶಿ : ಬಾಲ್ಯದ ಗೆಳಯರ ಭೇಟಿ ಸಂತಸ ತರುತ್ತವೆ. ಹೊಸ ವಾಹನ ಖರೀದಿ ನಡೆಯಲಿದೆ.ವ್ಯಾಪಾರಗಳು ವಿಸ್ತರಿಸುತ್ತವೆ. ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.ಆರ್ಥಿಕ ಸಮಸ್ಯೆಗಳ ಉತ್ತಮವಾಗಿರುತ್ತದೆ. ಧನ ಮತ್ತು ವಸ್ತುಗಳನ್ನ ಉಡುಗೊರೆಯಾಗಿ ಪಡೆಯಲಾಗುತ್ತದೆ.
ಅದೃಷ್ಟ ಸಂಖ್ಯೆ : 2 , ಅದೃಷ್ಣ ಬಣ್ಣ: ಕೆಂಪು.
ಕುಂಭ ರಾಶಿ : ವ್ಯಾಪಾರ ಮತ್ತು ಉದ್ಯೋಗಳು ಉತ್ಸಾಹದಾಯಕವಾಗಿ ಸಾಗುತ್ತದೆ. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ. ಕೈಗೊಂಡ ಎಲ್ಲಾ ಕಾರ್ಯಗಳು ಸಿದ್ದಿ ಉಂಟಾಗಲಿದೆ.
ಅದೃಷ್ಟ ಸಂಖ್ಯೆ : 9, ಅದೃಷ್ಟ ಬಣ್ಣ: ಕಿತ್ತಳೆ
ಮೀನ ರಾಶಿ: ವ್ಯವಹಾರದಲ್ಲಿ ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಬಂಧುಗಳೊಂದಿಗೆ ವಿವಾಧಗಳು ಕಿರಿಕಿರಿಯನ್ನುಂಟುಮಾಡುತ್ತವೆ. ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಸಮಸ್ಯೆಗಳು ಉಂಟಾಗುತ್ತವೆ.ಹೊಸ ಸಾಲಗಳನ್ನ ಮಾಡಲಾಗುತ್ತದೆ.
ಅದೃಷ್ಟ ಸಂಖ್ಯೆ :01, ಅದೃಷ್ಟ ಬಣ್ಣ: ಕೆಂಪು