suddibindu.in
honnavar:ಹೊನ್ನಾವರ
: ಖಾಸಗಿ ಬಸ್ ಹಾಗೂ ಓಮಿನಿ ನಡುವೆ ನಡೆದ ಅಪಘಾತದಲ್ಲಿ ಓಮಿನಿಯಲ್ಲಿದ್ದ ಓರ್ವ ಮೃತಪಟ್ಟು ಆತನ‌ ಪತ್ನಿ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಗೇರುಸೊಪ್ಪ ಶರಾವತಿ ಡ್ಯಾಂ (girsappa Dam)ಬಳಿ ನಡೆದಿದೆ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದ ಕಾರಣ ಓರ್ವ ಮೃತಪಟ್ಟಿದ್ದಾನೆ. ಭಟ್ಕಳದ ಅಬ್ದುಲ್ ವಜಿದ್ (೪೪) ಮೃತಪಟ್ಟಿದ್ದಾರೆ.ಇವರ ಪತ್ನಿ ಗುಲ್ಶನ್ ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳದಿಂದ ಸಾಗರಕ್ಕೆ ತೆರಳುತ್ತಿದ್ದ ಓಮಿನಿ ಹಾಗೂ ಸಾಗರದಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕರೆತರುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ.ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬಸ್ ಚಾಲಕನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.