www.suddibindu.in
Honnavar | ಹೊನ್ನಾವರ : ಉತ್ತರಕನ್ನಡ (uttara Kannada) ಜಿಲ್ಲೆಯಲ್ಲಿ ವರುಣನ ಅಬ್ಬರ ಮತ್ತೆ ಜೋರಾಗಿದ್ದು, ಮಳೆಯ ಅವಾಂತರಕ್ಕೆ ಹೊನ್ನಾವರ ಸಮೀಪ ರಾಷ್ಟೀಯ ಹೆದ್ದಾರಿಯಲ್ಲಿ National Highway ಗುಡ್ಡ ಕುಸಿತ ಉಂಟಾಗಿದೆ.
ಜಿಲ್ಲೆಯಲ್ಲಿ ನಿನ್ನೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ವರುಣ ಮತ್ತೆ ರಾತ್ರಿಯಿಂದ ಅಬ್ಬರಿಸಲಾರಂಭಿಸಿದೆ. ಭಾರಿ ಮಳೆಯ ಪರಿಣಾಮ ಹೊನ್ನಾವರ ಸಮೀಪ ಕರ್ನಲ್ ಹಿಲ್ ಬಳಿ ರಾಷ್ಟೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಬಿದಿದ್ದೆ. ಪರಿಣಾಮ ವಾಹನ ಸವಾರದಲ್ಲಿ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ
- “ಚೆಕ್ ವಿತರಣೆ ಆಯ್ತು, ಹಣ ಮಾತ್ರ ಬಂದಿಲ್ಲ: ಸಿಬರ್ಡ್ ನಿರಾಶ್ರಿತರಿಗೆ ನಿರಾಶೆ”
- ಜಿಲ್ಲಾ ಪಂಚಾಯತ ಸಿಇಒ ಈಶ್ವರ ಕಾಂದೂ ವರ್ಗಾವಣೆ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
ತಕ್ಷಣ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು (Honnavar Police) ಒಂದು ಕಡೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಹೆದ್ದಾರಿ ಗುತ್ತಿಗೆ ಪಡೆದಿರುವ ಐ ಆರ್ ಬಿ ಕಂಪನಿ ಹೆದ್ದಾರಿಯಲ್ಲಿ ಕುಸಿದು ಬಿದ್ದಿರುವ ಮಣ್ಣು ತೆರವು ಮಾಡು ಕಾರ್ಯ ನಡೆಸುತ್ತೊದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.